ಸಮಾಜ ಅಭಿವೃದ್ಧಿಯಲ್ಲಿ ಶಾಲಾ ನೈರ್ಮಲೀಕರಣ ಕಾರ್ಯಕ್ರಮ ಪ್ರಾಮುಖ್ಯತೆ ಹೊಂದಿದೆ: ಯು.ಟಿ. ಖಾದರ್

Update: 2022-08-08 07:35 GMT

ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಪಂಪ್‌ವೆಲ್ ಕಲ್ಪವೃಕ್ಷ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸೇವಾ ಸಪ್ತಾಹ ಆ.8ರಿಂದ15ರವರೆಗೆ ಆರೋಗ್ಯ ಮಾಹಿತಿ ಕಾರ್ಯಗಾರ, ಆರ್ಥಿಕ, ವೈದ್ಯಕೀಯ, ಶೈಕ್ಷಣಿಕ ನೆರವು ಹಾಗೂ ಶಾಲಾ ವಠಾರ ನೈರ್ಮಲೀಕರಣ ಕಾರ್ಯಕ್ರಮ ನಡೆಯಲಿದ್ದು, ಸೋಮವಾರ ದ.ಕ.ಜಿಲ್ಲಾ ಪಂಚಾಯಯ್‌ ಹಿರಿಯ ಪ್ರಾಥಮಿಕ ಶಾಲೆ ಬಗಂಬಿಲದಲ್ಲಿ ನಡೆಯಿತು.

ಶಾಲಾ ವಠಾರ ನೈರ್ಮಲೀಕರಣ  ಕಾರ್ಯಕ್ರಮಕ್ಕೆ ಶಾಸಕ ಯು.ಟಿ.ಖಾದರ್  ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವಿಶ್ವಾಸ ಭರಿತ ಸಮಾಜ ಅಭಿವೃದ್ಧಿಯ ಕರ್ನಾಟಕಕ್ಕೆಈ ನೈರ್ಮಲೀಕರಣ ಕಾರ್ಯಕ್ರಮ ಅತ್ಯತ್ತಮ ಪ್ರಾಮುಖ್ಯತೆ ಹೊಂದಿದೆ. ಲಯನ್ಸ್ ಕ್ಲಬ್ ಅವರ ನೈರ್ಮಲೀಕರಣ ನಿಮಗೂ ಪ್ರೇರಣೆ, ಮುಂದಿನ ದಿನಗಳಲ್ಲಿ ಇದನ್ನು ಶಾಲೆಯಲ್ಲಿ ಮುಂದುವರೆಸಿ ಎಂದರು.‌

ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯರಾದ ಪ್ರವೀಣ್ ಐ.ಬಗಂಬಿಲ, ಹಿರಿಯ ಆರೋಗ್ಯ ಅಧಿಕಾರಿ ವಿಕ್ರಂ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಯೋಗೀಶ್ ಆಚಾರ್ಯ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಸದಾಶಿವ ಉಳ್ಳಾಲ್, ನವೀನ್ ಬಗಂಬಿಲ, ಪಿಲಾರ್ ಕ್ಲಸ್ಟರ್ ಸಿ.ಆರ್.ಪಿ. ಗೀತಾ ಡಿ. ಶೆಟ್ಟಿ, ಲಯನ್ಸ್ ಕಾರ್ಯಕಾರಿ ಸಮಿತಿ ಸದಸ್ಯರಾದ ಸಂದೀಪ್ ಮಹಾಲೆ, ಉಮೇಶ್ ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ಮಂಗಳೂರು ಪಂಪ್ ವೆಲ್ ಕಲ್ಪವೃಕ್ಷ ಕಾರ್ಯದರ್ಶಿ ರೋಹಿತ್ ಮಾಸ್ಟರ್ ಪ್ರಾಸ್ತವಿಕವಾಗಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕ ವಸಂತ್ ರೈ ಸ್ವಾಗತಿಸಿದರು. ಶಿಕ್ಷಕಿ ಪ್ರತಿಮಾ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News