ಕೆಎಂಸಿ ಆಸ್ಪತ್ರೆಯಲ್ಲಿ ‘ಸಂರಕ್ಷಣೆಯಿಂದ ಬದಲಿ ಜೋಡಣೆಯವರೆಗೆ’ ಕಾರ್ಯಕ್ರಮ

Update: 2022-08-09 18:30 GMT

ಮಂಗಳೂರು: ಮಂಗಳೂರಿನ ಕೆಎಂಸಿ ಹಾಸ್ಪಿಟಲ್‌ನ ದಿ ಸೆಂಟರ್‌ಆಫ್‌ಎಕ್ಸೆಲೆನ್ಸ್ ಫಾರ್ ನೀ ಆ್ಯಂಡ್ ಹಿಪ್ (ಮಂಡಿ ಮತ್ತು ಸೊಂಟದ ಚಿಕಿತ್ಸೆಯ ಸಮಗ್ರ ಆರೈಕೆ ಕೇಂದ್ರ)ರವಿವಾರ ಕೆಎಂಸಿಯ ಮರೇನಾ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ‘ಸಂರಕ್ಷಣೆಯಿಂದ ಬದಲಿ ಜೋಡಣೆಯವರೆಗೆ’ ಎಂಬ ಕಾರ್ಯಕ್ರಮ ಆಯೋಜಿಸಿತ್ತು.

ಮಂಡಿ ಮತ್ತು ಸೊಂಟದ ಶಸ್ತ್ರಕ್ರಿಯೆಯ ವಿಶೇಷ ತಜ್ಞ ಮತ್ತು ಸಮಾಲೋಚನಾ ತಜ್ಞ ಡಾ.ಯೋಗೀಶ್ ಕಾಮತ್ ಮಾತನಾಡಿ, ಮಂಡಿ ಮತ್ತು ಸೊಂಟದ ಚಿಕಿತ್ಸೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಮತ್ತು ರೋಗಿಗಳ ವಿಶ್ವಾಸ ಹೆಚ್ಚಿಸುವುದು ಕಾರ್ಯಕ್ರಮದ ಉದ್ದೇಶ ಎಂದರು.

ಮಂಗಳೂರು ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯಾಚರಣೆ ಅಧಿಕಾರಿ ಸಗೀರ್ ಸಿದ್ದೀಕಿ ಮತ್ತು ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್ ಪ್ರೈ.ಲಿ.ನ ಮಾರುಕಟ್ಟೆ ವಿಭಾಗದ ಸಹ ಉಪಾಧ್ಯಕ್ಷ ಮಧುರ್‌ಗೋಪಾಲ್ ಮಾತನಾಡಿ, ಮಂಗಳೂರಿನಲ್ಲಿರುವ ಸ್ಪೆಷಲಿಸ್ಟ್ ನೀ ಆ್ಯಂಡ್ ಹಿಪ್ ಸೆಂಟರ್ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ನೀಡುತ್ತದೆ. ಇಲ್ಲಿ ಬದಲಿ ಕೀಳು ಜೋಡಣೆಯ ಶಸ್ತ್ರಕ್ರಿಯೆ ನಡೆದ ದಿನವೇ ಶೇ.100ರಷ್ಟು ರೋಗಿಗಳಿಗೆ ಎದ್ದು ನಿಲ್ಲಲು ಸಾಧ್ಯವಾಗಿರುತ್ತದೆ ಮತ್ತು ಶೇ.99ರಷ್ಟು ರೋಗಿಗಳಿಗೆ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮುನ್ನ ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಾಗುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಮಸ್ಯೆಮುಕ್ತರಾದ ಇತರ ಜಿಲ್ಲೆಗಳು, ಹೊರರಾಜ್ಯಗಳು ಮತ್ತು ವಿದೇಶಗಳ ರೋಗಿಗಳು ವೈಯಕ್ತಿಕವಾಗಿ ಮತ್ತು ವರ್ಚುವಲ್ ಮಾ್ಯಮದ ಮೂಲಕ ಭಾಗವಹಿಸಿದ್ದರು.

ಮಲೇಶ್ಯದಿಂದ ಮಾತನಾಡಿದ 73 ವರ್ಷದ ಕುಂಞಿಕೃಷ್ಣನ್ ಎಂಬವರು, ‘ನನಗೆ 2014ರಿಂದ ಮಂಡಿಯ ಸಂಕೀರ್ಣ ತೊಂದರೆಗಳು ಕಾಡಿದ್ದವು. ಕೆಎಂಸಿಯ ನೀ ಆ್ಯಂಡ್ ರಿಪ್ಲೇಸ್‌ಮೆಂಟ್ ಕ್ಲಿನಿಕ್‌ಗೆ ಬರುವ ಮುನ್ನ ನಾಲ್ಕು ಒಟ್ಟಾರೆ ಮಂಡಿ ಬದಲಿ ಜೋಡಣೆಗಳಿಗೆ ಒಳಗಾಗಿದ್ದೆನು. ಆದರೆ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನಾನು ಮಂಗಳೂರಿಗೆ ಬಂದು ಕೆಎಂಸಿ ಆಸ್ಪತ್ರೆಯಲ್ಲಿ 2019ರಲ್ಲಿ ಮಂಡಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆನು. ಶಸ್ತ್ರಕ್ರಿಯೆ ನಡೆದು ಈಗ ಮೂರು ವರ್ಷಗಳಾಗಿವೆ. ಇದು ನನಗೆ ಹೊಸ ಬದುಕಿನಂತೆ ಭಾಸವಾಗುತ್ತಿದೆ. ನಾನು ಕಾರು ಚಲಾಯಿಸಬಲ್ಲೆ, ಅಲ್ಲದೆ ಯಾವುದೇ ತೊಂದರೆ ಇಲ್ಲದೆ ವಾಕಿಂಗ್ ಮಾಡಬಲ್ಲೆನು. ಡಾ.ಯೋಗೀಶ್ ಕಾಮತ್ ಮತ್ತು ತಂಡಕ್ಕೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ' ಎಂದರು.

ಸಂಕೀರ್ಣವಾದ ಬದಲಿ ಕೀಲು ಜೋಡಣೆ ಶಸ್ತ್ರಚಿಕಿತ್ಸೆಗಳಿಗೆ ಒಳಗಾದ 40ರಿಂದ 80 ವರ್ಷ ವಯಸ್ಸಿನ ಸುಮಾರು 90 ರೋಗಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News