ಮಾಜಿ ಸಂಸದ ಪವನ್ ವರ್ಮಾ ತೃಣಮೂಲ ಕಾಂಗ್ರೆಸ್ ಗೆ ರಾಜೀನಾಮೆ

Update: 2022-08-12 09:12 GMT
Photo:PTI

ಹೊಸದಿಲ್ಲಿ : ಮಾಜಿ ರಾಜ್ಯಸಭಾ ಸಂಸದ ಪವನ್ ವರ್ಮಾ (Pavan Varma)ಅವರು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದ 10 ತಿಂಗಳ ನಂತರ ಇಂದು ರಾಜೀನಾಮೆ ನೀಡಿದ್ದಾರೆ. ರಾಜತಾಂತ್ರಿಕ ಹಾಗೂ ರಾಜಕಾರಣಿಯಾಗಿರುವ ವರ್ಮಾ ಅವರು  ಕಳೆದ ವರ್ಷ ನವೆಂಬರ್‌ನಲ್ಲಿ ಜನತಾ ದಳ (ಸಂಯುಕ್ತ) ದಿಂದ ಹೊರಹಾಕಲ್ಪಟ್ಟ ನಂತರ ತೃಣಮೂಲ ಕಾಂಗ್ರೆಸ್‌ಗೆ (Trinamool Congress)ಸೇರಿದ್ದರು.

ತೃಣಮೂಲದಿಂದ ನಿರ್ಗಮಿಸುವುದಾಗಿ ಟ್ವಿಟರ್‌ನಲ್ಲಿ ಘೋಷಿಸಿದ ವರ್ಮಾ "ಪ್ರೀತಿಯ ಮಮತಾ ಬ್ಯಾನರ್ಜಿ ಜೀ, ದಯವಿಟ್ಟು ತೃಣಮೂಲ ಕಾಂಗ್ರೆಸ್‌ಗೆ ನನ್ನ ರಾಜೀನಾಮೆಯನ್ನು ಸ್ವೀಕರಿಸಿ. ನನಗೆ ನೀಡಿದ ಆತ್ಮೀಯ ಸ್ವಾಗತ ಹಾಗೂ  ನಿಮ್ಮ ಪ್ರೀತಿ ಮತ್ತು ಸೌಜನ್ಯಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಿಮಗೆ ಶುಭ ಹಾರೈಸುತ್ತೇನೆ’’ ಎಂದು ಬರೆದಿದ್ದಾರೆ.

ವರ್ಮಾ ಅವರನ್ನು 2020 ರ ಜನವರಿಯಲ್ಲಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಜೊತೆಗೆ "ಪಕ್ಷದ ಶಿಸ್ತು" ಅನುಸರಿಸದ ಆರೋಪದ ಮೇಲೆ ಜೆಡಿಯುನಿಂದ ಹೊರಹಾಕಲಾಗಿತ್ತು.

ಪವನ್ ವರ್ಮಾ ಅವರು ಹಲವಾರು ದೇಶಗಳಿಗೆ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ ಹಾಗೂ  ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರೂ ಆಗಿದ್ದಾರೆ. ವರ್ಮಾ ಅವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ - ಡ್ರುಕ್ ತುಕ್ಸೆ ಪ್ರಶಸ್ತಿಯನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News