ಮದರ್‌ ತೆರೇಸಾರ 25ನೇ ಸಂಸ್ಮರಣಾ ದಿನಾಚರಣೆ: ಆ.20ರಂದು ಜಿಲ್ಲಾ ಮಟ್ಟದ ಪ್ರಬಂಧ, ಚಿತ್ರಕಲಾ ಸ್ಪರ್ಧೆ

Update: 2022-08-13 04:57 GMT
ಮದರ್‌ ತೆರೇಸಾ (source: PTI)

ಮಂಗಳೂರು, ಆ.13: ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ 25ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಆ.20ರಂದು ಬೆಳಗ್ಗೆ 9:30ಕ್ಕೆ ನಗರದ ಮಿಲಾಗ್ರಿಸ್ ಕಾಲೇಜಿನಲ್ಲಿ ದ.ಕ. ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸ್ಪರ್ಧೆಗಳು ಹೈಸ್ಕೂಲ್, ಕಾಲೇಜು ಹಾಗೂ ಸಾರ್ವಜನಿಕ ವಿಭಾಗದಲ್ಲಿ ನಡೆಸಲಾಗುತ್ತದೆ. 'ಸಹಾನುಭೂತಿ ಮತ್ತು ಆಧ್ಯಾತ್ಮಿಕತೆ' ಎಂಬ ವಿಷಯದಲ್ಲಿ  ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಅದೇರೀತಿ ಪ್ರಬಂಧ ಸ್ಪರ್ಧೆಯು 'ಪ್ರಾರ್ಥನೆ ಮಾಡುವ ತುಟಿಗಳಿಗಿಂತ ಇತರರಿಗೆ ಸಹಾಯ ಮಾಡುವ ಕೈಗಳೇ ಲೇಸು' - ಮದರ್ ತೆರೇಸಾ ಎಂಬ ವಿಷಯದಲ್ಲಿ ಹೈಸ್ಕೂಲ್ ವಿಭಾಗಕ್ಕೂ, 'ಕೋವಿಡ್ 19ರ ಕಾಲದಲ್ಲಿ ಮದರ್ ತೆರೇಸಾ ನೆನಪುಗಳು' ಎಂಬ ವಿಷಯದಲ್ಲಿ ಕಾಲೇಜು ವಿಭಾಗಕ್ಕೂ ಹಾಗೂ 'ವೈವಿಧ್ಯ ಭಾರತದಲ್ಲಿ ಮಾನವೀಯ ಸೇವೆಗಳು' ಎಂಬ ವಿಷಯವನ್ನು ಸಾರ್ವಜನಿಕ ವಿಭಾಗಕ್ಕೂ ನೀಡಲಾಗಿದೆ.

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ನಿವಾಸದ ಮೇಲೆ ದಾಳಿ ವೇಳೆ 'ರಹಸ್ಯ ದಾಖಲೆ' ವಶ: ವರದಿ

ಭಾಗವಹಿಸುವ ಎಲ್ಲಾ ಸ್ಪರ್ಧಾಳುಗಳು ಅಂದು ಬೆಳಗ್ಗೆ 9:30ಕ್ಕೆ ನಿಗದಿತ ಸ್ಥಳದಲ್ಲಿ ಹಾಜರಿರಬೇಕು.ವಿದ್ಯಾರ್ಥಿಗಳು ತಮ್ಮ ಶಾಲಾ ಕಾಲೇಜಿನ  ಗುರುತುಚೀಟಿ ಹಾಗೂ ಶಾಲಾ ಕಾಲೇಜು ಮುಖ್ಯಸ್ಥರಿಂದ ಅನುಮತಿ ಪತ್ರವನ್ನು ತರತಕ್ಕದ್ದು. ಸಾರ್ವಜನಿಕ ವಿಭಾಗದಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ತಮ್ಮ ಆಧಾರ್ ಕಾರ್ಡ್ ನ್ನು ತರತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ 9611876693, 9448503739,9845084707 ನಂಬರಿಗೆ ಸಂಪರ್ಕಿಸಬೇಕೆಂದು ವಿಚಾರ ವೇದಿಕೆಯ ಮಾಧ್ಯಮ ಸಮಿತಿ ಸಂಚಾಲಕ  ಸುಶೀಲ್ ನೊರೋನ್ಹಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News