ಮಾದರಿ ದಾಖಲಾತಿ ಸಮೀಕ್ಷೆಯ ಮೂಲಕ ನಿಖರ ಮಾಹಿತಿ: ಅಪರ ಜಿಲ್ಲಾಧಿಕಾರಿ ವೀಣಾ

Update: 2022-08-13 12:57 GMT
ವೀಣಾ ಬಿ.ಎನ್.

ಉಡುಪಿ :  ಮಾದರಿ ದಾಖಾಲಾತಿ ಸಮೀಕ್ಷೆಯ ಮೂಲಕ ಶಿಶುವಿನ  ಮರಣ ಪ್ರಮಾಣ, ಜನನ ಮತ್ತು ಮರಣ ದರಗಳು ಹಾಗೂ ಇತರೇ ಅಂದಾಜುಗಳನ್ನು ನಿಖರವಾಗಿ ಲೆಕ್ಕ ಮಾಡಲು ಸಾಧ್ಯವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಹೇಳಿದ್ದಾರೆ. 

ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಜನಗಣತಿ ನಿರ್ದೇಶನಾಲಯದ ವತಿಯಿಂದ ಮಾದರಿ ದಾಖಲಾತಿ ಸಮೀಕ್ಷಾ ಕಾರ್ಯವನ್ನು ಆಯ್ದ ಕ್ಷೇತ್ರಗಳಲ್ಲಿ ಕೈಗೊಳ್ಳುವ ಕುರಿತ ೨ ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. 

ತರಬೇತಿಯಲ್ಲಿ ಭಾಗವಹಿಸಿದ ೫೬ ಸಮೀಕ್ಷಾದಾರರು ತರಬೇತಿ ಪಡೆದು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಅವರು ತಿಳಿಸಿದರು.

ಕ್ಷೇತ್ರ ಮಟ್ಟದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆ ಯರು, ಶಿಕ್ಷಕರು ಸೇರಿದಂತೆ ಆಯ್ದ ಸಮೀಕ್ಷಾದಾರರು ಮೊಬೈಲ್ ಆ್ಯಪ್ ಮೂಲಕ ಸಮೀಕ್ಷಾ ಕಾರ್ಯ ಕೈಗೊಳ್ಳುವ ಕುರಿತು ತರಬೇತಿ ನೀಡಲಾಯಿತು. ಜನಗಣತಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಗಿರೀಶ್‌ಕುಮಾರ್ ಕೆ. ಮತ್ತು ಸಂಪನ್ಮೂಲ ವ್ಯಕ್ತಿಗಳಾದ ಪಾಂಡುರಂಗ ತರಬೇತಿ ನೀಡಿದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರಾಧಾಕೃಷ್ಣ ಅಡಿಗ ಸ್ವಾಗತಿಸಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಜಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News