ಈ ಧ್ವಜ ಶಾಶ್ವತವಾಗಿ ಇರಲಿದೆ, ಮುಂದಿನ ಪೀಳಿಗೆಗೆ ಮಾರ್ಗ ದರ್ಶನದ ಸಂಕೇತ ಆಗಲಿದೆ: ಯುಟಿ ಖಾದರ್

Update: 2022-08-15 09:51 GMT

ಉಳ್ಳಾಲ: ಸಮೀಪದ ಓವರ್ ಬ್ರಿಡ್ಜ್ ಬಳಿ ನಿರ್ಮಾಣಗೊಂಡ 110 ಅಡಿ ಎತ್ತರದ ಧ್ವಜ ಸ್ಥಂಭದಲ್ಲಿ ಬೃಹತ್ ರಾಷ್ಟ್ರ ಧ್ವಜಾರೋಹಣ ನೆರವೇರಿತು.

ಶಾಸಕ ಯುಟಿ ಖಾದರ್ ಧ್ವಜಾರೋಹಣ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಈ ಧ್ವಜ ಶಾಶ್ವತವಾಗಿ ಇರಲಿದೆ. ಈ ಧ್ವಜ ರಾಷ್ಟ್ರದ ಸಂಕೇತವಾಗಿ ಹಾರಾಡಲಿದೆ. ಮುಂದಿನ ಪೀಳಿಗೆಗೆ ಮಾರ್ಗ ದರ್ಶನದ ಸಂಕೇತ ಆಗಲಿದೆ. ನಾವು ಅಭಿವೃದ್ಧಿ ಕಡೆ ಒತ್ತು ನೀಡಬೇಕು. ನಮ್ಮ ಮನಸ್ಸಿನಿಂದ ದ್ವೇಷವನ್ನು ಕಿತ್ತು ಎಸೆಯಬೇಕು. ಜಾತಿ ಧರ್ಮ ಬಿಟ್ಟು ಒಗ್ಗಟ್ಟು ಪ್ರದರ್ಶನ ಮಾಡಬೇಕು. ಶೈಕ್ಷಣಿಕವಾಗಿ ಕ್ಷೇತ್ರ ಬೆಳೆದಿದೆ. ಶಾಶ್ವತ ಕುಡಿಯುವ ನೀರು ವ್ಯವಸ್ಥೆ ಇಲ್ಲಿ ಆಗಬೇಕಿದೆ. ಅಭಿವೃದ್ಧಿಗೆ ನಗರ, ಗ್ರಾಮ ಪಂಚಾಯತ್ ಒತ್ತು ನೀಡಿ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಪ್ರಯುಕ್ತ ಉಳ್ಳಾಲದಿಂದ ಓವರ್ ಬ್ರಿಡ್ಜ್ ವರೆಗೆ ವಿದ್ಯಾರ್ಥಿಗಳ ಮೆರವಣಿಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನಗರ ಸಭೆ ಅಧ್ಯಕ್ಷ ಚಿತ್ರಕಲಾ, ಉಪಾಧ್ಯಕ್ಷ ಅಯ್ಯೂಬ್ ಮಂಚಿಲ, ಪೌರಾಯುಕ್ತ ವಿದ್ಯಾ ಕಾಳೆ, ತಹಶೀಲ್ದಾರ್ ಗುರುಪ್ರಸಾದ್,  ಗ್ರಾಮಕರಣಿಕ ಪ್ರಮೋದ್, ವಿಧಾನ ಪರಿಷತ್ ಸದಸ್ಯ ಬಿಎಂ ಫಾರೂಕ್, ಚಂದ್ರ ಹಾಸ್ ಪಂಡಿತ್ ಹೌಸ್, ಸಂತೋಷ್ ಬೋಳಿಯಾರ್, ಸತೀಶ್ ಕುಂಪಲ, ಪುರುಷೋತ್ತಮ ಕಲ್ಲಾಪು, ಸದಾಶಿವ ಉಳ್ಳಾಲ್, ಬಾಜಿಲ್ ಡಿಸೋಜ, ವಿವಿಧ ಗ್ರಾಮ ಪಂಚಾಯತ್ ಗಳ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ, ನಗರ ಸಭೆಯ ಕೌನ್ಸಿಲರ್ ಗಳು, ವಿವಿಧ ಸಂಘಟನೆಗಳ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಅಧ್ಯಾಪಕರು, ಸ್ಥಳೀಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News