×
Ad

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುವ ವ್ಯಕ್ತಿಗಳಲ್ಲಿ ನಾನೂ ಒಬ್ಬ: ಸಚಿವ ಶ್ರೀರಾಮುಲು

Update: 2022-08-16 13:36 IST

ಬಳ್ಳಾರಿ: 'ಅವಕಾಶ ಬಂದಾಗ ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುವ ವ್ಯಕ್ತಿಗಳಲ್ಲಿ ನಾನೂ ಒಬ್ಬ' ಎಂದು ಸಚಿವ ಬಿ.ಶ್ರೀರಾಮುಲು (B. Sriramulu) ಹೇಳಿದ್ದಾರೆ. 

ನಗರದಲ್ಲಿ ಜಿಲ್ಲಾ  ಕುರುಬರ ಸಂಘ ಹಮ್ಮಿಕೊಂಡಿದ್ದ ವಿದ್ಯಾರ್ಥಿ ನಿಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

'ಸಿದ್ದರಾಮಯ್ಯ ಮತ್ತು ನಾನು ರಾಜಕೀಯದಲ್ಲಿ ಬಹಳ ವಿರುದ್ಧ. ಆದರೆ, ನಾವಿಬ್ಬರು ಬಹಳಷ್ಟು ದೋಸ್ತಿಗಳು' ಎಂದು ಹೇಳುತ್ತಿದ್ದಂತೆ ಸಭೆಯಲ್ಲಿದ್ದವರು ಎಲ್ಲರೂ ಚಪ್ಪಾಳೆ ತಟ್ಟಿದರು. 

'ನಾವು ರಾಜಕೀಯಗೋಸ್ಕರ ಮಾತನಾಡುತ್ತೇವೆ, ವೈಯಕ್ತಿಕವಾಗಿ ನನಗೂ ಸಿದ್ದರಾಮಯ್ಯ ಅವರಿಗೂ ಯಾವುದೇ ದ್ವೇಷ ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ರಾಜ್ಯದಲ್ಲಿ ನೀವು ಇನ್ನೊಬ್ಬ ದೇವರಾಜ ಅರಸ್ ಆಗಬೇಕೆಂದು ನಾನು ಹೇಳಿದ್ದೆ. ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಹೇಗೆ ಗೆಲುವು ದಾಖಲಿಸಿದರೆಂದು ಒಮ್ಮೆ ಕೇಳಿ. ಅವರು ಬಹಿರಂಗವಾಗಿ ಹೇಳಲ್ಲ, ಸಂದರ್ಭ ಬಂದರೆ ಹೇಳುತ್ತೇನೆ' ಎಂದು ಹೇಳಿದ್ದಾರೆ.

'ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕೆಂದು ನಾನು ಆಸೆಪಟ್ಟರೆ, ನಾನು ಮುಖ್ಯಮಂತ್ರಿಯಾಗಬೇಕೆಂದು ಹೇಳಿದರೆ ಸಿದ್ದರಾಮಯ್ಯ ಅವರೂ ಒಪ್ಪಿಕೊಳ್ಳುತ್ತಾರೆ' ಎಂದು ತಿಳಿಸಿದರು. 

ಇದನ್ನೂ ಓದಿ:  ಸರ್ಕಾರ ನಡೆಯುತ್ತಿಲ್ಲ ಎಂದ ಮಾಧುಸ್ವಾಮಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ: ಮುನಿರತ್ನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News