ಮೈಸೂರು: ರಸ್ತೆ ಅಗಲೀಕರಣಕ್ಕಾಗಿ 97 ವರ್ಷ ಹಳೆಯ ಮಸೀದಿ ಕಟ್ಟಡ ತೆರವುಗೊಳಿಸಿದ ಮುಸ್ಲಿಮರು

Update: 2022-08-16 09:41 GMT

ಮೈಸೂರು, ಆ.15: ಸುಮಾರು 97 ವರ್ಷಗಳ ಇತಿಹಾಸ ಹೊಂದಿದ್ದ ಜಾಮೀಯ ಮಸೀದಿ ಕಟ್ಟಡವನ್ನು ತರವುಗೊಳಿಸುವ ಮೂಲಕ ಜಿಲ್ಲಾ ವಕ್ಫ್ ಬೋಡ್9 ಸಲಹಾ ಸಮಿತಿ ಮತ್ತು ಮುಸ್ಲಿಮರು ಸೌಹಾರ್ದತೆ ಮೆರೆದಿದ್ದಾರೆ.

ನಗರದ ಇರ್ವಿನ್ ರಸ್ತೆಯಲ್ಲಿದ್ದ ಜಾಮಿಯಾ ಮಸೀದಿಗೆ 97 ವರ್ಷಗಳ ಇತಿಹಾಸವಿದೆ. ಇದೊಂದು ಪಾರಂಪರಿಕ ಕಟ್ಟಡ ಎಂದು ಹಿಂದಿನ  ಜಿಲ್ಲಾ ವಕ್ಫ್ ಬೋಡ್9 ಸಲಹಾ ಸಮಿತಿ ಹೇಳಿತ್ತು.

ಆದರೆ, ಮಹಾನಗರ ಪಾಲಿಕೆ ರಸ್ತೆಯ ಇತರೆ ಅಕ್ಕ ಪಕ್ಕದ ಕಟ್ಟಡಗಳನ್ನು ತೆರವುಗೊಳಿಸಿ ಇದನ್ನೂ ತೆರವುಗೊಳಿಸುವಂತೆ ಮನವಿ ಮಾಡಿತ್ತಾದರೂ ಹಿಂದಿನ ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ ಇದು ಪಾರಂಪರಿಕ ಕಟ್ಟಡ, ಹಾಗಾಗಿ ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರರ್ಟ್ ಮೊರೆ ಹೋಗಿತ್ತು. ಇದನ್ನು ಪರಿಶೀಲಿಸಿದ ನ್ಯಾಯಾಲಯ ಅರ್ಜಿದಾರರ ಅರ್ಜಿಯನ್ನು ವಜಾಗೊಳಿಸಿತ್ತು.

ಇದರ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಎಲ್.ನಾಗೇಂದ್ರ ಮತ್ತು ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ,  ಮುಡಾ ಆಯುಕ್ತ ದಿನೇಶ್,  ವಕ್ಫ್ ಬೋಡ್9 ಸಲಹಾ ಸಮಿತಿ ಸದಸ್ಯರು ಮತ್ತು ಕೆಲವು ಮುಸ್ಲಿಮ್ ಮುಖಂಡರೊಂದಿಗೆ ಮಾತುಕತೆ ನಡೆಸಿ  ಈ ರಸ್ತೆ ಕಿರಿದಾಗಿದ್ದು, ಸಾರ್ವಜನಿಕರ ದೃಷ್ಟಿಯಿಂದ ಈ ರಸ್ತೆಯನ್ನು ಅಗಲೀಕರಣ ಮಾಡಬೇಕಿದ್ದು, ಇದನ್ನು ತೇವುಗೊಳಿಸಿಕೊಡುವಂತೆ ಮನವಿ ಮಾಡಿದ್ದರು.

ಇದಕ್ಕೆ ಸ್ಪಂಧಿಸಿದ ವಕ್ಫ್ ಬೋಡ್9 ಸಲಹಾ ಸಮಿತಿ ಸದಸ್ಯರು ಸ್ವತಃ ತಾವೇ ಸುಮಾರು 8 ಅಡಿಗಳಷ್ಟು ಗೋಡೆಯನ್ನು ತೆರವುಗೊಳಿಸಿ ಶಾಂತಿ ಸೌಹಾರ್ಧತೆ ಕಾಪಾಡುವಲ್ಲಿ ಹೆಜ್ಜೆಹಾಕಿದರು. 

ಇದೇ ವೇಳೆ ಮಂಗಳವಾರ ಜಾಮಿಯಾ ಮಸೀದಿ ತೆರವು ಸ್ಥಳಕ್ಕೆ ಆಗಮಿಸಿದ ಶಾಸಕ ಎಲ್.ನಾಗೇಂದ್ರ ಅಧಿಕಾರಿಗಳು ಮತ್ತು ವಕ್ಫ್ ಬೋಡ್9 ಸಲಹಾ ಸಮಿತಿ ಸದಸ್ಯರೊಟ್ಟಿಗೆ ಪರಿಶೀಲನೆ ನಡೆಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,''ಹಿಂದೂ-ಮುಸ್ಲಿಮರು ಅಣ್ಣ- ತಮ್ಮಂದಿರಿದ್ದಂತೆ. ಆದರೆ ಕೆಲವು ಕಿಡಿಗೇಡಿಗಳಿಂದ ಅಶಾಂತಿಯುಂಟಾಗುತ್ತಿದೆ. ಇಷ್ಟೊಂದು ದೊಡ್ಡ ಜಾಗವನ್ನು ಸಾರ್ವಜನಿಕರ ಓಡಾಟದ ದೃಷ್ಟಿಯಿಂದ ಮುಸ್ಲಿಮರು ಸ್ವತಃ ತೆರವುಗೊಳಿಸಿ ಇತರರಿಗೂ ಮಾದರಿಯಾಗಿದ್ದಾರೆ'' ಎಂದು ಹೇಳಿದರು.

'ನಮಗೆ ಸಂಘರ್ಷ ಬೇಡ, ಶಾಂತಿ ಬೇಕು. ಇದನ್ನೇ ಮಹಾತ್ಮಾಗಾಂಧಿ ಕಾಲದಿಂದಲೂ ಹೇಳಿರುವುದು. ಮೈಸೂರಿನ ಜನ ನಾವೆಲ್ಲರೂ ಒಟ್ಟಾಗಿದ್ದೇವೆ. ಅದರ ಪರಿಣಾಮವೇ ಮುಸ್ಲಿಮ್ ಬಾಂದವರು ಮಸೀದಿ ಕಟ್ಟಡವನ್ನು ತೆರವುಗೊಳಿಸಿರುವುದು. ಈ ಕಟ್ಟಡ ಜಾಗಕ್ಕೆ ಈಗಾಗಲೇ ಸರ್ಕಾರ ರೂ.3.48 ಕೋಟಿ ರೂ. ಪರಿಹಾರ ನೀಡಿದ್ದು, ಇವರ ಜೊತೆಗೆ ನಾವೆಲ್ಲರೂ ಸದಾ ಇರುತ್ತೇವೆ' ಎಂದು ಹೇಳಿದರು.

ಈ ವೇಳೆ ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ ಅಧ್ಯಕ್ಷ ಗಯಾಝ್ ಅಹಮದ್ ಅಕ್ರಮ್, ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ, ಮುಡಾ ಆಯುಕ್ತ ದಿನೇಶ್, ಜಿಲ್ಲಾ ವಕ್ಫ್ ಬೋಡ್ 9 ಅಧಿಕಾರಿ ಮುಹಮದ್ ಮುಸ್ತಾಕ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ:  ದಲಿತ ಬಾಲಕನನ್ನು 18 ಗಂಟೆಗಳ ಕಾಲ ಶೌಚಾಲಯದಲ್ಲಿ ಕೂಡಿ ಹಾಕಿದ ಶಿಕ್ಷಕನ ಬಂಧನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News