ತುಮಕೂರು | ವಿದೇಶದಿಂದ ವಾಪಸ್ಸಾಗಲು ನಿರಾಕರಿಸಿದ ಪತ್ನಿ: ಮೂವರು ಮಕ್ಕಳಿಗೆ ವಿಷವುಣಿಸಿ ವ್ಯಕ್ತಿ ಆತ್ಮಹತ್ಯೆ
ತುಮಕೂರು, ಆ.20: ವಿದೇಶದಲ್ಲಿ ಮನೆಗೆಲಸಕ್ಕೆ ತೆರಳಿರುವ ಪತ್ನಿ ಮನೆಗೆ ವಾಪಸ್ಸಾಗಲು ಒಪ್ಪುತ್ತಿಲ್ಲ ಎಂಬ ಕಾರಣಕ್ಕೆ ನೊಂದ ವ್ಯಕ್ತಿಯೋರ್ವ ತನ್ನ ಮೂವರು ಮಕ್ಕಳಿಗೆ ವಿಷವುಣಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ನಗರದ ಪಿ.ಎಚ್. ಕಾಲನಿಯಲ್ಲಿ ನಡೆದಿರುವುದು ವರದಿಯಾಗಿದೆ.
ಮೃತರನ್ನು ಸಮೀ ಉಲ್ಲಾ (35) ಎಂದು ಗುರುತಿಸಲಾಗಿದೆ. ವಿಷ ಸೇವನೆಗೊಳಗಾದ ಮೂವರು ಮಕ್ಕಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಸಮೀಉಲ್ಲಾ (35) ಕಾರ್ಮಿಕರಾಗಿದ್ದು, ಅವರ ಪತ್ನಿ ಸಾಯಿರಾ ಬಾನು ನಾಲ್ಕು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಮನೆಕೆಲಸದ ವೃತ್ತಿ ಮಾಡುತ್ತಿದ್ದಾಳೆ. ಸಾಯಿರಾ ಬಾನುವನ್ನು ಊರಿಗೆ ವಾಪಸ್ಸಾಗುವಂತೆ ಸಮೀಉಲ್ಲಾ ಮಾಡುತ್ತಿದ್ದ ನಿರಂತರ ಮನವಿಗಳನ್ನು ಆಕೆ ತಿರಸ್ಕರಿಸುತ್ತಿದ್ದಾಳೆನ್ನಲಾಗಿದೆ. ಮಕ್ಕಳು ಕೂಡಾ ಮನೆಗೆ ವಾಪಸ್ಸಾಗುವಂತೆ ಗೋಗರೆದು ಬೇಡಿಕೊಂಡರು ಆಕೆ ಸಮ್ಮತಿಸಲಿಲ್ಲ ಎನ್ನಲಾಗಿದೆ. ಇದರಿಂದ ಬೇಸತ್ತ ಸಮೀಉಲ್ಲಾ ಮೂವರು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ತಿಲಕ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: BBMP ಇಂಜಿನಿಯರ್ ಸೋಗಿನಲ್ಲಿ ಸಿಎಂ ಗೃಹ ಕಚೇರಿಗೆ ಪ್ರವೇಶಿಸಿದ ಆರೋಪಿಯ ಬಂಧನ