ಆಡು ಮುಟ್ಟದ ಸೊಪ್ಪಿಲ್ಲ, BJP ಮಾಡದ ಭ್ರಷ್ಟಾಚಾರ ಕ್ಷೇತ್ರವಿಲ್ಲ: ಡಿ.ಕೆ. ಶಿವಕುಮಾರ್

Update: 2022-08-27 13:18 GMT

ಬೆಂಗಳೂರು: ಆರ್‍ಟಿಇ ಅಡಿಯಲ್ಲಿ ಶುಲ್ಕವನ್ನು ಮರುಪಾವತಿ ಮಾಡಬೇಕಾದರೆ, ಶೇ.30 ರಿಂದ ಶೇ.40ರಷ್ಟು ಲಂಚವನ್ನು ನೀಡಬೇಕಾಗಿದೆ ಎಂಬ ಆರಪಿಸಿ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಮ್ಯಾನೇಜ್‍ಮೆಂಟ್ ಸಂಘ(ರೂಪ್ಸಾ) ಕರ್ನಾಟಕವು ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ. 

ಈ ಕುರಿತು ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, 'ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಶಿಕ್ಷಣ ಕ್ಷೇತ್ರಕ್ಕೂ ನುಸುಳಿರುವುದು ನಾಚಿಕೆಗೇಡು' ಎಂದು ಕಿಡಿಕಾರಿದ್ದಾರೆ. 

''ಮಾನ್ಯತೆ ನವೀಕರಣಕ್ಕೂ ಹಣಕ್ಕಾಗಿ ಕೈಚಾಚುತ್ತಿರುವ ಬಿಜೆಪಿಯು ಆಡಳಿತವೆಂದರೆ ದುಡ್ಡು ಮಾಡುವ ದಂಧೆ ಎಂದು ತಿಳಿದಿದೆ. 'ಆಡು ಮುಟ್ಟದ ಸೊಪ್ಪಿಲ್ಲ, ಬಿಜೆಪಿ ಮಾಡದ ಭ್ರಷ್ಟಾಚಾರ ಕ್ಷೇತ್ರವಿಲ್ಲ' ಎನ್ನುವುದು ಈಗಿನ ಕಹಿ ವಾಸ್ತವ'' ಎಂದು ಆಶಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ಕಮಿಷನ್ ದಂಧೆಯನ್ನೂ ಕೂಡಾ ಇವರು ದೇಶಭಕ್ತಿ ಎಂದು ವಾದಿಸಿದರೆ ಅಚ್ಚರಿ ಏನಿಲ್ಲ: BJP ವಿರುದ್ಧ ಎಚ್.ಸಿ ಮಹದೇವಪ್ಪ ಕಿಡಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News