ಮುರುಘಾ ಶರಣರು ಆರೋಪ ಮುಕ್ತರಾಗಲಿದ್ದಾರೆ: ಬಿ.ಎಸ್. ಯಡಿಯೂರಪ್ಪ

Update: 2022-08-28 14:29 GMT
ಬಿ.ಎಸ್. ಯಡಿಯೂರಪ್ಪ (File Photo)

ಬೆಂಗಳೂರು, ಆ. 28:‘ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಕ್ಕೆ ಗುರಿಯಾಗಿರುವ ಚಿತ್ರದುರ್ಗದ(Chitradurga) ಮುರುಘಾ ರಾಜೇಂದ್ರ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು(Sri Shivamurthy Murugha Sharanaru ) ಯಾವುದೇ ರೀತಿಯ ತಪ್ಪು ಮಾಡಿಲ್ಲ. ನನಗೆ ಈಗಲೂ ವಿಶ್ವಾಸವಿದ್ದು, ಅವರು ಆರೋಪದಿಂದ ಮುಕ್ತರಾಗಿ ಬರಲಿದ್ದಾರೆ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BSYediyurappa) ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಶ್ರೀಗಳ ವಿರುದ್ಧ ಸುಳ್ಳು ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ. ಮುರುಘಾ ಮಠದ ಬಗ್ಗೆ ಗೊತ್ತಿರುವ ಯಾರೂ ಶ್ರೀಗಳ ವಿರುದ್ಧ ಇಂತಹ ಆರೋಪ ಮಾಡಲು ಸಾಧ್ಯವೇ ಇಲ್ಲ. ಇದೊಂದು ವ್ಯವಸ್ಥಿತ ಷಡ್ಯಂತರ' ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹಲವು ವರ್ಷಗಳಿಂದ ಮುರುಘಾ ಶರಣರು ಶಿಕ್ಷಣ, ಆರೋಗ್ಯ, ಧಾರ್ಮಿಕ ಕ್ಷೇತ್ರವೂ ಸೇರಿದಂತೆ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಎಲ್ಲರ ಪ್ರೀತಿಪಾತ್ರಕ್ಕೆ ಪಾತ್ರವಾಗಿದ್ದಾರೆ. ಹೀಗಿರುವಾಗ ಅಪ್ರಾಪ್ತ ಬಾಲಕಿಯರು ಮಾಡಿರುವ ಆರೋಪದಲ್ಲಿ ಎಳ್ಳಷ್ಟು ಸತ್ಯವಿಲ್ಲ. ಹೀಗಾಗಿ ಶ್ರೀಗಳು ಶೀಘ್ರವೇ ಆರೋಪ ಮುಕ್ತರಾಗಲಿದ್ದಾರೆ' ಎಂದು ಯಡಿಯೂರಪ್ಪ ತಿಳಿಸಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ಮಂಗಳೂರು ಭೇಟಿ ಹಿನ್ನೆಲೆ; ಬಂಗ್ರಕೂಳೂರಿನ ಟೆಂಟ್ ನಿವಾಸಿಗಳ ಎತ್ತಂಗಡಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News