ಇಸ್ರೇಲ್ ಯೋಧನಿಗೆ ಇರಿದ ಪೆಲೆಸ್ತೀನ್ ಪ್ರಜೆಯ ಹತ್ಯೆ

Update: 2022-09-03 16:35 GMT

ಜೆರುಸಲೇಂ, ಸೆ.೩: ಆಕ್ರಮಿತ ಪಶ್ಚಿಮ ದಂಡೆ ಪ್ರದೇಶದ ಹೆಬ್ರಾನ್ ಬಳಿಕ ಸೇನಾ ನೆಲೆಯೊಂದರ ಯೋಧನಿಗೆ ಚೂರಿಯಿಂದ ಇರಿದ ಪೆಲೆಸ್ತೀನ್ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.

ಪೆಲೆಸ್ತೀನ್ ಆರೋಗ್ಯ ಇಲಾಖೆಯೂ ಇದನ್ನು ದೃಢಪಡಿಸಿದೆ. ಶುಕ್ರವಾರ ಮಿಲಿಟರಿ ನೆಲೆಯೊಂದರ ಬಳಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಅಲ್ಲಿ ಕರ್ತವ್ಯದಲ್ಲಿದ್ದ ಯೋಧನ ಮೇಲೆ ಚೂರಿಯಿಂದ ದಾಳಿ ಮಾಡಿದ್ದಾನೆ. ಆಗ ಬಳಿಯಲ್ಲಿದ್ದ ಮತ್ತೊಬ್ಬ ಯೋಧ ದಾಳಿಕೋರನನ್ನು ಗುಂಡಿಕ್ಕಿ ಹತ್ಯೆ ಮಾಡಿದೆ. ಚೂರಿ ಇರಿತದಿಂದ ಗಾಯಗೊಂಡಿದ್ದ ಯೋಧನನ್ನು ಆಸ್ಪತ್ರೆಗೆ ದಾಖಲಿಸಿದ್ದು ಆತ ಚೇತರಿಸಿಕೊಂಡಿದ್ದಾನೆ ಎಂದು ಇಸ್ರೇಲ್ ಸೇನೆ ಹೇಳಿಕೆ ನೀಡಿದೆ.

ಹೆಬ್ರಾನ್ ಬಳಿ ಯುವಕನೊಬ್ಬ ಹತ್ಯೆಯಾಗಿರುವ ಬಗ್ಗೆ ತನಗೆ ಮಾಹಿತಿಯಿದೆ, ಆದರೆ ಆತನ ಗುರುತು ಪತ್ತೆಯಾಗಿಲ್ಲ ಎಂದು ಪೆಲೆಸ್ತೀನ್ ಆರೋಗ್ಯ ಇಲಾಖೆ ಪ್ರತಿಕ್ರಿಯಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News