ಎಫ್-16 ಯುದ್ಧವಿಮಾನ ಮೇಲ್ದರ್ಜೆಗೇರಿಸಲು ಪಾಕಿಸ್ತಾನಕ್ಕೆ ಅಮೆರಿಕ 450 ದಶಲಕ್ಷ ಡಾಲರ್ ನೆರವು

Update: 2022-09-09 02:15 GMT
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಪಾಕಿಸ್ತಾನ ಹೊಂದಿರುವ 85 ಎಫ್-16 ಯುದ್ಧವಿಮಾನಗಳನ್ನು ಮೇಲ್ದರ್ಜೆಗೇರಿಸಲು 450 ದಶಲಕ್ಷ ಡಾಲರ್ ನೆರವು ನೀಡಲು ಅಮೆರಿಕ ನಿರ್ಧರಿಸಿದೆ. ಇದು ಆರ್ಥಿಕ ಮತ್ತು ಪರಿಸರಾತ್ಮಕವಾಗಿ ದಯನೀಯ ಸ್ಥಿತಿ ಎದುರಿಸುತ್ತಿರುವ ದೇಶಕ್ಕೆ ವರದಾನವಾಗಲಿದೆ.

ಅಮೆರಿಕದ ರಕ್ಷಣಾ ಇಲಾಖೆ ಬುಧವಾರ ಹೇಳಿಕೆ ನೀಡಿ, ಸುಮಾರು 450 ದಶಲಕ್ಷ ಡಾಲರ್ ಮೊತ್ತದಲ್ಲಿ ಎಫ್-16 ಯುದ್ಧವಿಮಾನದ ಸುಸ್ಥಿರತೆ ಮತ್ತು ಸಂಬಂಧಿತ ಸಾಧನಗಳ ವಿದೇಶಿ ಮಿಲಿಟರಿ ಮಾರಾಟವನ್ನು ಆಂಗೀಕರಿಸುವ ಬದ್ಧತೆಯನ್ನು ಪ್ರಕಟಿಸಿತ್ತು.

ಬಳಿಕ ಪೆಂಟಗಾನ್‍ನ ರಕ್ಷಣಾ ಭದ್ರತೆ ಸಹಕಾರ ಏಜೆನ್ಸಿ ಸಂಭಾವ್ಯ ಮಾರಾಟದ ಅಧಿಸೂಚನೆ ಹೊರಡಿಸಿ, ಇದರಲ್ಲಿ ಹೊಸ ಸಾಮರ್ಥ್ಯ ವೃದ್ಧಿ ಅಥವಾ ಶಸ್ತ್ರಾಸ್ತ್ರಗಳು ಸೇರಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಈ ಪ್ರಸ್ತಾವಿತ ಮಾರಾಟವು ಅಮೆರಿಕದ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತಾ ಗುರಿಗಳಿಗೆ ಪೂರಕವಾಗಿ ಇರಲಿದೆ ಹಾಗೂ ಭಯೋತ್ಪಾದನೆ ವಿರೋಧಿ ಪ್ರಯತ್ನಗಳಿಗೆ ಸಂಬಂಧಿಸಿದಂತೆ ಅಮೆರಿಕ ಹಾಗೂ ಮಿತ್ರದೇಶಗಳ ಜತೆ ಪಾಕಿಸ್ತಾನ ಅಂತರ ಕಾರ್ಯಾಚರಣೆಯನ್ನು ಉಳಿಸಿಕೊಳ್ಳಲು ನೆರವಾಗಲಿದೆ. ಈ ನೆರವು ಇಡೀ ಪ್ರದೇಶದಲ್ಲಿ ಮೂಲ ಸೇನಾ ಸಮತೋಲನವನ್ನು ಪರಿವರ್ತಿಸುವುದಿಲ್ಲ ಎಂದು ಅಧಿಸೂಚನೆ ಸ್ಪಷ್ಟಪಡಿಸಿರುವುದಾಗಿ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News