ಬ್ರಿಟನ್ ದೊರೆಯಾಗಿ ಚಾಲ್ರ್ಸ್: ಇಂದು ಅಧಿಕೃತ ಘೋಷಣೆ

Update: 2022-09-09 17:44 GMT

ಲಂಡನ್, ಸೆ.9: ಚಾಲ್ರ್ಸ್ ಅವರನ್ನು  ಬ್ರಿಟನ್‍ನ ನೂತನ ದೊರೆಯಾಗಿ ಶನಿವಾರ ಬೆಳಿಗ್ಗೆ ಅಧಿಕೃತವಾಗಿ ಘೋಷಿಸಲಾಗುವುದು ಎಂದು ಬಕಿಂಗ್ಹಾಮ್ ಅರಮನೆಯ ಮೂಲಗಳು ಹೇಳಿವೆ.

ಗುರುವಾರ ನಿಧನರಾದ ರಾಣಿ ಎಲಿಝಬೆತ್ ಅವರ ಉತ್ತರಾಧಿಕಾರಿಯ ನೇಮಕ ಪ್ರಕ್ರಿಯೆ ನಡೆಸುವ ಸಮಿತಿಯು ಸೆ.10ರಂದು ಬೆಳಿಗ್ಗೆ 10 ಗಂಟೆಗೆ ಸಭೆ ಸೇರಿದ ಬಳಿಕ,  11 ಗಂಟೆಗೆ ಲಂಡನ್‍ನ ಸೈಂಟ್ ಜೇಮ್ಸ್ ಅರಮನೆಯ ಬಾಲ್ಕನಿಯಲ್ಲಿ ನಿಂತು ಸಾರ್ವಜನಿಕವಾಗಿ ಘೋಷಿಸಲಿದೆ ಎಂದು ಮೂಲಗಳು ಹೇಳಿವೆ. ಬ್ರಿಟನ್‍ನಲ್ಲಿ ಅತ್ಯಂತ ದೀರ್ಘಾವಧಿ ಕಾರ್ಯನಿರ್ವಹಿಸಿದ ರಾಜವಂಶಸ್ಥೆಯಾಗಿರುವ ಎಲಿಝಬೆತ್ ಗುರುವಾರ ಮೃತಪಟ್ಟಿದ್ದರು. ಅವರಿಗೆ 96 ವರ್ಷ ವಯಸ್ಸಾಗಿತ್ತು.

ರಾಣಿ ನಿಧನರಾದ ಮಾಹಿತಿ ಲಭಿಸುತ್ತಿದ್ದಂತೆಯೇ ಸಭೆ ಸೇರಿದ್ದ ಸಮಿತಿಯು ಅವರ ಹಿರಿಯ ಮಗ ಚಾಲ್ರ್ಸ್‍ರನ್ನು ಉತ್ತರಾಧಿಕಾರಿಯಾಗಿ ಹೆಸರಿಸಿತ್ತು. ಈ ಬಗ್ಗೆ ಅಧಿಕೃತ ಘೋಷಣೆ ಇಂದು(ಶನಿವಾರ) ಹೊರಬೀಳಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News