ಉತ್ತರ ಪ್ರದೇಶದ ಇಟಾವಾದಲ್ಲಿ ಗೋಡೆ ಕುಸಿತ, 10 ಮಂದಿ ಸಾವು

Update: 2022-09-24 06:48 GMT
Photo:NDTV

ಇಟಾವಾ: ಉತ್ತರ ಪ್ರದೇಶದ ಇಟಾವಾದಲ್ಲಿ ನಿರಂತರ ಮಳೆಯಿಂದಾಗಿ ಎರಡು ಪ್ರತ್ಯೇಕ ಗೋಡೆ ಕುಸಿದ ಪ್ರಕರಣದಲ್ಲಿ(Wall Collapse Incident) ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಹಾಗೂ  ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಟಾವಾ ಹೊರತುಪಡಿಸಿ, ಫಿರೋಝಾಬಾದ್ ಮತ್ತು ಬಲರಾಮ್‌ಪುರ ಸೇರಿದಂತೆ ಇತರ ಕೆಲವು ಜಿಲ್ಲೆಗಳಿಂದಲೂ ಸಾವುಗಳು ವರದಿಯಾಗಿವೆ.

ಇಟಾವಾದ ಚಂದ್ರಾಪುರದಲ್ಲಿ ಮನೆಯ ಗೋಡೆ ಕುಸಿದು ನಾಲ್ಕು ಮಕ್ಕಳು ಸಾವನ್ನಪ್ಪಿದರೆ, ಕೃಪಾಲ್‌ಪುರದಲ್ಲಿ ಗುಡಿಸಲಿನ ಮೇಲೆ ಪೆಟ್ರೋಲ್ ಪಂಪ್‌ನ ಗೋಡೆ ಕುಸಿದು ವೃದ್ಧ ದಂಪತಿ ಸಾವನ್ನಪ್ಪಿದ್ದಾರೆ.

ಮತ್ತೊಂದು ಘಟನೆಯಲ್ಲಿ, ಇಟಾವಾದ ಅಂಡವಾ ಕೆ ಬಾಂಗ್ಲಾ ಗ್ರಾಮದಲ್ಲಿ ಭಾರೀ ಮಳೆಯ ನಂತರ ಮನೆ ಕುಸಿದು 35 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.

ನಾಲ್ಕನೇ ಘಟನೆ ಅಜ್ಮತ್ ಅಲಿ ಪ್ರದೇಶದಲ್ಲಿ ವರದಿಯಾಗಿದ್ದುಅಲ್ಲಿ ಮನೆಯ ಗೋಡೆ ಕುಸಿದು ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News