ಅಕ್ಟೋಬರ್ 1 ರಂದು 5G ಸೇವೆಗೆ ಪ್ರಧಾನಿ ಮೋದಿಯಿಂದ ಚಾಲನೆ

Update: 2022-09-24 09:51 GMT
Photo:PTI

ಹೊಸದಿಲ್ಲಿ: ಅಕ್ಟೋಬರ್ 1 ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ 5G ಸೇವೆಗಳನ್ನು ಆರಂಭಿಸಲಿದ್ದಾರೆ(5G Services To Be Launched) ಎಂದು ಸರಕಾರದ ರಾಷ್ಟ್ರೀಯ ಬ್ರಾಡ್‌ಬ್ಯಾಂಡ್ ಮಿಷನ್ ಇಂದು ಟ್ವೀಟ್ ಮಾಡಿದೆ.

"ಭಾರತದ ಡಿಜಿಟಲ್ ರೂಪಾಂತರ ಮತ್ತು ಸಂಪರ್ಕವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಮೂಲಕ, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು , ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಪ್ರದರ್ಶನ ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ ಭಾರತದಲ್ಲಿ 5G ಸೇವೆಗಳನ್ನು ಹೊರ ತರಲಿದ್ದಾರೆ " ಎಂದು ರಾಷ್ಟ್ರೀಯ ಬ್ರಾಡ್‌ಬ್ಯಾಂಡ್ ಮಿಷನ್ ಟ್ವಿಟಿಸಿದೆ.

ಕಡಿಮೆ ಅವಧಿಯಲ್ಲಿ ದೇಶದಲ್ಲಿ 5G ಟೆಲಿಕಾಂ ಸೇವೆಗಳ 80 ಪ್ರತಿಶತ ಕವರೇಜ್ ಮಾಡುವ ಗುರಿಯನ್ನು ಸರಕಾರ ನೀಡಿದೆ ಎಂದು ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಕಳೆದ ವಾರ ಹೇಳಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News