ಸಹಕಾರಿ ತತ್ವದಲ್ಲಿ ನಂಬಿಕೆಯಿಟ್ಟು ಪರಸ್ಪರ ಸಹಕಾರದೊಂದಿಗೆ ಬೆಳೆಯಿರಿ: ಡಾ. ವೀರೇಂದ್ರ ಹೆಗ್ಗಡೆ

Update: 2022-09-24 13:01 GMT

ಮಂಗಳೂರು, ಸೆ. 24: ಸಹಕಾರಿ ತತ್ವದಲ್ಲಿ ನಂಬಿಕೆ ಇಟ್ಟು ಪರಸ್ಪರ ಸಹಕಾರದೊಂದಿಗೆ ಬೆಳೆಯಿರಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ರಾಜ್ಯ ಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

"ಸಹಕಾರ ರತ್ನ, ಡಾ.ಎಂ.ಎನ್. ರಾಜೇಂದ್ರ ಕುಮಾರ್‌ ಅವರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ ಬೆಂಗಳೂರು 'ಇದರ ಅಧ್ಯಕ್ಷರಾಗಿ, ಎರಡನೇ ಬಾರಿಗೆ ಅವಿರೋ ಧವಾಗಿ ಆಯ್ಕೆಗೊಂಡಿ ರುವ ಹಿನ್ನಲೆಯಲ್ಲಿ ಎಲ್ಲಾ ಸಹಕಾರಿ ಗಳ ಪರವಾಗಿ  ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿಂದು ಹಮ್ಮಿ ಕೊಂಡಿದ್ದ ಅಭಿನಂದನಾ  ಸಮಾರಂಭದ ಅಧ್ಯಕ್ಷತೆ ಯನ್ನುವಹಿಸಿ  ಅವರು ಮಾತನಾ ಡುತ್ತಿದ್ದರು.

ರಾಜೇಂದ್ರ ಕುಮಾರ್ ಅವರು ಸಹಕಾರಿ ರಂಗದ ಮೂಲಕ ಏಕಾಗ್ರತೆ, ಅಚಲವಾದ ನಂಬಿಕೆ ,ಶ್ರದ್ಧೆ ಇದ್ದ ಕಾರಣ ಅವರು ರಾಷ್ಟ್ರ ಮಟ್ಟದ ಸಾಧನೆ ಮಾಡಿದ್ದಾರೆ. ಸಹಕಾರಿ ರಂಗದ ಬಗ್ಗೆ ನಂಬಿಕೆ ಮೂಡಿಸಿದ್ದಾರೆ. ನೂ ರಾರು ಶಾಖೆಗಳನ್ನು ಮಾಡಿದ್ದಾರೆ. ಮಹಾತ್ಮಾಗಾಂಧಿಯವರು ಸಹಕಾರಿ ರಂಗಕ್ಕೆ ಮಹತ್ವ ನೀಡಿದ್ದರು. ಸಹಕಾರಿ ರಂಗದ ಮೂಲಕ ಅಭಿವೃದ್ಧಿ ಎಂದು ಅವರು ನಂಬಿದ್ದರು. ಸಹಕಾರಿ ತತ್ವ ಎಂದರೆ ಎಲ್ಲರೂ ಜೊತೆ ಯಾಗಿ ಬೆಳೆಯೋಣ ಎಲ್ಲರೂ ಜೊತೆ ಯಾಗಿ ಸಾಧಿಸೋಣ ಎನ್ನುವುದು. ಜಿಲ್ಲೆಯ ಸಹಕಾರಿ ರಂಗವನ್ನು ಹಲವು ದಶಕಗಳಿಂದ ನೋಡಿದ್ದೇನೆ. ಈ ಹಿಂದೆ ಇದರ ನೇತೃತ್ವ ವಹಿಸಿದ್ದವರು ಸಹಕಾರಿ ರಂಗವನ್ನು ಎಚ್ಚರಿಕೆ ಯಿಂದ ಕಾವು ಕೊಟ್ಟು ಬೆಳೆಸಿದರು ರಾಜೇಂದ್ರ ಕುಮಾರ್ ಈ ರಂಗವನ್ನು ಇನ್ನಷ್ಟು ವಿಸ್ತಾರವಾಗಿ ಬೆಳೆಯುವಂತೆ ಹಕ್ಕಿ ಯಂತೆ ಹಾರಲು ಅವಕಾಶ ಮಾಡಿದರು. ಈ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಅಭಿನಂದನಾ ಮಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಭಿನಂದನಾ ಭಾಷಣ ಮಾತನಾಡುತ್ತಾ, ರಾಜೇಂದ್ರ ಕುಮಾರ್ ಸಹಕಾರಿ ರಂಗದಲ್ಲಿ  ಸಾಧನೆ ಮಾಡಿ ರಾಜನಂತೆ ಮೆರೆದವರು. ಸಹಕಾರಿ ರಂಗದ ಭೀಷ್ಮ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು ಇದರ ಇತಿಹಾಸದಲ್ಲಿ 1945ರ ನಂತರ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಮೊದಲ ಅಧ್ಯಕ್ಷರಾಗಿ 2017ರಲ್ಲಿ ಆಯ್ಕೆಗೊಂಡಿದ್ದ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಇದೀಗ ಎರಡನೇ ಬಾರಿಯೂ ಈ ಪ್ರತಿಷ್ಠಿತ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಗೊಳ್ಳುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ ಎಂದರು.

ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು 1999ರಿಂದ ಇದುವರೆಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನ ನಿರ್ದೇಶಕರಾಗಿದ್ದು, 2005ರಿಂದ 2010ರವರೆಗೆ ಈ ಪ್ರತಿಷ್ಠಿತ ಬ್ಯಾಂಕಿನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ ಬ್ಯಾಂಕಿನ ಸರ್ವಾಂಗೀಣ ಅಭಿವೃದ್ಧಿಯ ಪೂರಕ ಶಕ್ತಿಯಾಗಿ ಶ್ರಮಿಸಿದ್ದರು. ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಇದರ ಮನಜಿಂಗ್‌ ಟ್ರಸ್ಟಿಯಾಗಿ ನವೋದಯ ಸ್ವ-ಸಹಾಯ ಸಂಘಗಳ  ವಿವಿಧೋದ್ದೇಶ ಸಹಕಾರಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು ಎಂದು ಹರೀಶ್ ಶೆಟ್ಟಿ ಅಭಿನಂಧಿಸಿದರು. 

ನನ್ನ ಸಾಧನೆಗೆ ಹೆಗ್ಗಡೆ ಯವರೇ ಸ್ಪೂರ್ತಿ:- ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಯವರು ನನ್ನ ಬದುಕಿನ ಲ್ಲಿ ಶಿಸ್ತು ಮತ್ತು ಸಾಧನೆ ಮಾಡಲು ಪ್ರೇರಣಾ ಶಕ್ತಿ ಯಾಗಿದ್ದವರು, ಮಾರ್ಗದರ್ಶನ ಮಾಡುತ್ತಿರುವವರು ಎಂದು ಸನ್ಮಾನ ಸ್ವೀಕರಿಸಿದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ಸಹಕಾರಿ ರಂಗದ ಸಾಧನೆ ಎಲ್ಲರ ಸಹಕಾರದಿಂದ ಸಾಮೂಹಿಕ ಪ್ರಯತ್ನ ದಿಂದ ಸಾಧ್ಯವಾಗಿದೆ. ನಾವು ಬೆಳೆಯುವ ಮೂಲಕ ಇತರರ ಬೆಳವಣೆಗೆಗೆ ಕಾರಣವಾಗುವುದು ನಮ್ಮ ಧರ್ಮ. ನಾನು ಸಹಕಾರಿ ರಂಗದ ಮೂಲಕ ಈ ಧರ್ಮ ವನ್ನು ಪಾಲಿಸಿದ್ಧೇನೆ ಎನ್ನುವ ತೃಪ್ತಿ ಇದೆ. ಈ ಸಾಧನೆ ಮಾಡಲು ನೆರವಾದವರನ್ನು ಸ್ಮರಿಸುತ್ತಾ ಅಭಿನಂದಿಸಿದ ಎಲ್ಲರಿಗೂ  ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಸಮಾರಂಭದಲ್ಲಿ "ಜಾಗತಿಕ ಬಂಟರ ಒಕ್ಕೂಟ ಲಿ.ಮಂಗಳೂರು ಇದರ ಅಧ್ಯಕ್ಷರಾ ದ ಐಕಳ ಹರೀಶ್‌ ಶೆಟ್ಟಿಯವರು ಆಭಿನಂದ ನಾ ಭಾಷಣವನ್ನು ಮಾಡುತ್ತಾ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್‌ ಶುಭಾಶಂಸನೆ ಮಾಡಿ ಮಾತನಾಡುತ್ತಾ, ಸಹಕಾರಿ ರಂಗದ ಮೂಲಕ ಸಮಾಜಕ್ಕೆ ಕೊಡುಗೆ ನೀಡಿ ನಿರಂತರ ಪರಿಶ್ರಮದ ಮೂಲಕ ಸಹಕಾರದ ರಂಗದ ಎತ್ತರಕ್ಕೆ ಏರಿದ ಅವರಿಗೆ ಅಭಿನಂದಿ ಸುವುದಾಗಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಅದಾನಿ ಗ್ರೂಪ್‌ನ ಸೌತ್ ಇಂಡಿಯಾ ಅಧ್ಯಕ್ಷರಾದ ಕಿಶೋರ್ ಆಳ್ವ  ಮಾತನಾಡು ತ್ತಾ  ರಾಜೇಂದ್ರ ಕುಮಾರ್ ಸಹಕಾರಿ ಸಂಘ ದಲ್ಲಿ ಕ್ರಾಂತಿ ಮಾಡಿದ ಸಾಧಕ,ಗುಜರಾತಿನ ಸಹಕಾರಿ ರಂಗದಮೂಲಕ  ದಕ್ಷಿಣ ಕನ್ನಡ ದಲ್ಲಿ ಕ್ರಾಂತಿ ಮಾಡಿದ್ದಾರೆ ಎಂದು ಶುಭ ಹಾರೈಸಿದರು.

ಅಭಿನಂದನಾ ಸಮಾರಂಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್,ಮಾಜಿ ಸಚಿವ ನಾಗರಾಜ ಶೆಟ್ಟಿ, ಮಂಗಳೂರು ಪೊಲೀಸ್ ಕಮೀಷನರ್ ಶಶಿ ಕುಮಾರ್ ,ಬ್ಯಾಂಕಿನ ಉಪಾಧ್ಯಕ್ಷ ರಾದ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ  ದೇವಿ ಪ್ರಸಾದ್ ಶೆಟ್ಟಿ ಐಕಳ ಬಾವ,ಭಾಸ್ಕರ ಎಸ್ ಕೊಟ್ಯಾನ್, ರಾಜು ಪೂಜಾರಿ, ಜಯರಾಮ ರೈ, ವಾದಿರಾಜ ಶೆಟ್ಟಿ, ಜಯರಾಜ ರೈ, ಸದಾಶಿವ ಉಳ್ಳಾಲ, ಮೋಹನ್ ಶೆಟ್ಟಿ ಎಕ್ಕಾರು, ನಿರಂಜನ, ಕೆಎಂಎಫ್ ಅಧ್ಯಕ್ಷ ಸುಚರಿತ ಶೆಟ್ಟಿ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಜಯಕರ ಶೆಟ್ಟಿ ಇಂದ್ರಾಳಿ, ಎಸ್ ಸಿ ಡಿ ಸಿ ಸಿ ಬ್ಯಾಂಕ್ ನ  ವ್ಯವಸ್ಥಾಪಕ ನಿರ್ದೇಶಕ ಗೋಪಾಲ ಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಅಭಿನಂದನಾ ಸಮಿತಿಯ ಅಧ್ಯಕ್ಷ ಶಶಿ ಕುಮಾರ್ ರೈ ಬಾಲ್ಯೊಟ್ಟು  ಸ್ವಾಗತಿಸಿದರು. ಕರ್ನಾಟಕ ರಾಜ್ಯ  ಸಹಕಾರ ಮಾರಾಟ ಮಹಾಮಂಡಳ ನಿ ಬೆಂಗಳೂರು ನಿರ್ದೇಶಕರಾಗಿ ಆಯ್ಕೆಯಾದ ದೇವಿ ಪ್ರಸಾದ್ ಶೆಟ್ಟಿ, ದಿನೇಶ್ ಕೊಪ್ಪ ಅವರನ್ನು ಇದೇ ಸಂದರ್ಭದಲ್ಲಿ ಆಭಿನಂದಿಸಲಾಯಿತು.

ವಿಮಾನ ನಿಲ್ದಾಣದಲ್ಲಿ ಅವರನ್ನು  ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಹಕಾರಿ ಮುಖಂಡರು ಅದ್ದೂರಿ ಯಾಗಿ ಸ್ವಾಗತಿಸಿ ಸಮಾರಂಭದ ಆವರಣದ ವರೆಗೆ  ಮೆರವಣಿಗೆಯಲ್ಲಿ ಕರೆತರಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News