ಬೇಕಲ ಉಸ್ತಾದ್ ರವರ ಎರಡನೇ ಆಂಡ್ ನೇರ್ಚೆ ಪ್ರಯುಕ್ತ ಮದ್ರಸ ಕಟ್ಟಡಕ್ಕೆ ಶಿಲಾನ್ಯಾಸ

Update: 2022-09-24 13:03 GMT

ಕೊಣಾಜೆ: ಮರಿಕ್ಕಳ ಜುಮ್ಮಾ ಮಸೀದಿ ಮೊಂಟೆಪದವು ಇದರ ಆಶ್ರಯದಲ್ಲಿ ನಡೆಯುತ್ತಿರುವ ಶೈಖುನಾ ತಾಜುಲ್ ಫುಖಹಾಹ್ ಬೇಕಲ ಉಸ್ತಾದ್ ರವರ ಎರಡನೇ ಆಂಡ್ ನೇರ್ಚೆ ಹಾಗೂ ಸ್ವಲಾತ್ ವಾರ್ಷಿಕದ ಪ್ರಯುಕ್ತ ಮಹದನುಲು ಉಲೂಂ ಮದ್ರಸ ಕಟ್ಟಡಕ್ಕೆ ಉಡುಪಿ ಸಂಯುಕ್ತ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅವರು ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ಬೇಕಲ್ ಉಸ್ತಾದ್ ಜೀವನ ಕಾಲದಲ್ಲಿ ಧಾರ್ಮಿಕ ಶಿಕ್ಷಣ ಕ್ಕೆ ಮಹತ್ವ ನೀಡಿದವರು. ಮದ್ರಸ ಶಿಕ್ಷಣ ಕ್ಕೂ ಉತ್ತೇಜನ ನೀಡಿದ್ದಾರೆ.ಧಾರ್ಮಿಕ ಗ್ರಂಥಗಳ ಅಧ್ಯಯನ ಮಾಡುವ ಜತೆಗೆ ಸಮುದಾಯದ ಮನದಟ್ಟು ಆಗುವ ರೀತಿಯಲ್ಲಿ ಬೋಧನೆ ಕೂಡಾ ಮಾಡಿದವರು.ಅವರನ್ನು ಸ್ಮರಣೆ ನಾವು ಮಾಡಬೇಕು  ಎಂದು ಹೇಳಿದರು.

ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಮುನೀರ್ ಅಲ್ ಹಾದಿ ತಂಙಳ್  ಉದ್ಘಾಟಿಸಿ ಮಾತನಾಡಿದರು. ಸಯ್ಯದ್ ಯುಪಿಎಸ್ ತಂಙಳ್ ಬೇಕಲ್  ದುವಾ ನೆರವೇರಿಸಿದರು. ಕಾರ್ಯಕ್ರಮದಲ್ಲಿ  ಹೃದಯ ತಜ್ಞ ಡಾ. ಮೂಸಕುಂಞಿ, ಕಣಚೂರು ಮೋನು, ಹೈದರ್ ಪರ್ತಿಪ್ಪಾಡಿ,ಆಲಿಕುಂಞಿಪಾರೆ, ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಟಿ.ಎಸ್ ಅಬ್ದುಲ್ಲಾ ಸಾಮಣಿಗೆ , ಮರಿಕ್ಕಳ ಮಸೀದಿ ಅಧ್ಯಕ್ಷ ಅಬ್ಬಾಸ್ ಕೊಡಂಚ್ಚಿಲ್, ಅಬ್ಬಾಸ್ ಸಖಾಫಿ ಪೂಡಲ್ , ಅಬ್ದುಲ್ ರಝಾಕ್ ಅಬೂದಾಬಿ, ಸಾಧೀಕ್ ಹಾಜಿ, ಯಾಸೀನ್ ತಂಙಳ್, ಶಿಹಾಬುದ್ದೀನ್ ತಂಙಳ್ ಮದಕ, ಶಹೀರ್ ತಂಙಳ್ ಪೊಸೋಟ್, ಮುನೀರ್ ಅಹ್ದಲ್ ತಂಙಳ್, ಶರಪುದ್ದೀನ್ ತಂಙಳ್ ಪರೀದ್ ನಗರ, ಉಸ್ಮಾನ್ ಸ ಅದಿ ಪಟ್ಟೋರಿ, ಫಾರೂಕ್ ಅಬ್ಬಾಸ್  ಉಳ್ಳಾಲ, ಶಾಸಕ ಯುಟಿ ಖಾದರ್,ಎನ್ ಎಸ್ ಕರೀಂ, ಅಬ್ದುಲ್ ರಹಿಮಾನ್ ಚಂದಹಿತ್ಲು ಉಪಸ್ಥಿತರಿದ್ದರು. ಜಲೀಲ್ ಮೊಂಟುಗೋಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News