ಹೂಡೆ ಸಾಲಿಹಾತ್ ಸಂಸ್ಥೆಯ ಬೋಧಕೇತರ ಸಿಬ್ಬಂದಿಗೆ ಸನ್ಮಾನ

Update: 2022-09-24 14:38 GMT

ಉಡುಪಿ, ಸೆ.24: ತೋನ್ಸೆ ಹೂಡೆಯ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಸುದೀರ್ಘಅವಧಿ ಸೇವೆ ಸಲ್ಲಿಸಿದ ಬೋಧಕೇತರ ಸಿಬ್ಬಂದಿಗಳಿಗೆ ಅವರ ಸೇವಾ ಹಿರಿತನದ ಆಧಾರದ ಮೇಲೆ ಇತ್ತೀಚೆಗೆ ಸನ್ಮಾನಿಸಲಾಯಿತು.

ಶಾಲಾ ಬಸ್ ಚಾಲಕರಾಗಿ ಕಳೆದ 24 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ  ಹಮೀದ್ ಹಾಗೂ ಗುಮಾಸ್ತರಾಗಿ ಕಳೆದ 26 ವರ್ಷಗಳಿಂದ ಸೇವೆ ಸಲ್ಲಿಸುತ್ತಿ ರುವ ಪ್ರಮೀಳಾ ಸಾಲಿನ್ಸ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಕೆಮ್ಮಣ್ಣು ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ  ಅರುಣ್ ಫೆರ್ನಾಂಡಿಸ್ ಮಾತನಾಡಿದರು.

ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷ ಇದ್ರಿಸ್ ಹೂಡೆ ವಹಿಸಿದ್ದರು. ವೇದಿಕೆಯಲ್ಲಿ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಪ್ರಾಂಶುಪಾಲ ಡಾ.ಸಬೀನಾ, ದಿವ್ಯಾ ಪೈ, ಕುಲ್ಸುಮ್‌ಅಬೂಬಕರ್, ಮುಖ್ಯ ಶಿಕ್ಷಕಿಯರಾದ ಸುನಂದ, ತಸ್ಮೀಯ, ಶಾದತ್ ಆಸೀಫ್ ಉಪಸ್ಥಿತರಿದ್ದರು. ನಂತರ ಬೋಧಕೇತರ ಸಿಬ್ಬಂದಿ ಯಿಂದ ವಿವಿಧ ಸಾಂಸ್ಕೃತಿಕ, ಆಟೋಟ ಸ್ಪರ್ಧೆ ಏರ್ಪಡಿಸಿ, ಬಹುಮಾನ ವಿತರಿಸಲಾಯಿತು.

ಶಿಕ್ಷಕಿ ಅನೀಸಾ ಪ್ರಾರ್ಥನೆಗೈದರು. ಶಿಕ್ಷಕಿ ನಂದಾ ಸ್ವಾಗತಿಸಿದರು. ಶೈಲಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಶೋಭಾ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News