ರಾಣಿ ಎಲಿಝಬೆತ್ ಅಂತ್ಯಕ್ರಿಯೆ ವೆಚ್ಚ ಮೀರಿಸಲಿದೆ ಶಿಂಝೊ ಅಬೆ ಅಂತ್ಯಕ್ರಿಯೆ: ವರದಿ

Update: 2022-09-24 18:26 GMT
ಸಾಂದರ್ಭಿಕ ಚಿತ್ರ (Photo credit: bloomberg)

ಹೊಸದಿಲ್ಲಿ: ಜಪಾನ್‌ನ ಮಾಜಿ ಪ್ರಧಾನಿ ಶಿಂಝೊ ಅಬೆ(Shinzo Abe) ಅವರ ಅಂತ್ಯಕ್ರಿಯೆ ಮುಂದಿನ ವಾರ ನಡೆಯಲಿದ್ದು, ಈ ಕಾರ್ಯಕ್ರಮದ ದುಬಾರಿ ವೆಚ್ಚವು ದೇಶದ ಜನರು ಭಾರೀ ಟೀಕೆಗಳಿಗೆ ಕಾರಣವಾಗಿದೆ. ಈ ವರ್ಷದ ಜುಲೈನಲ್ಲಿ ಶಿಂಝೊ ಅಬೆ ಅವರನ್ನು ಹತ್ಯೆ ಮಾಡಲಾಗಿತ್ತು.

ಜಪಾನಿನ ಸರ್ಕಾರವು ಸುಮಾರು 1.66 ಶತಕೋಟಿ ಯೆನ್ ಅನ್ನು ಕಾರ್ಯಕ್ರಮಕ್ಕಾಗಿ ಖರ್ಚು ಮಾಡುತ್ತಿದ್ದು, ಇದು ರಾಣಿ ಎಲಿಝಬೆತ್ II(Queen Elizabeth) ರ ಅಂತ್ಯಕ್ರಿಯೆಯ ವೆಚ್ಚಕ್ಕಿಂತ ಹೆಚ್ಚಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಅಬೆ ಅವರ ದುಬಾರಿ ವೆಚ್ಚದ ಅಂತ್ಯಕ್ರಿಯೆಯ ವಿವಾದವು ಜಪಾನ್‌ನಲ್ಲಿ ಪ್ರತಿಭಟನೆಗಳಿಗೆ ಕಾರಣವಾಗಿದೆ. ಅಲ್ಲಿ ಅನೇಕರು ಕಾರ್ಯಕ್ರಮವನ್ನು ವಿರೋಧಿಸಿದ್ದಾರೆ. ಅಬೆ ಅವರ ಅಂತ್ಯಕ್ರಿಯೆ ಮತ್ತು ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆಯ ವೆಚ್ಚದ ನಡುವೆ  ಅಂದಾಜು  1.3 ಬಿಲಿಯನ್ ಯೆನ್‌ ವ್ಯತ್ಯಾಸವಿದೆ ಎಂದು ವರದಿಯಾಗಿದೆ. 

ದಿ ಗಾರ್ಡಿಯನ್ ವರದಿಯ ಪ್ರಕಾರ, ಜಪಾನ್ ಸರ್ಕಾರವು ಅಂತ್ಯಕ್ರಿಯೆಯ ಅಂದಾಜು ವೆಚ್ಚವನ್ನು 250 ಮಿಲಿಯನ್ ಯೆನ್ ಎಂದು ಲೆಕ್ಕ ಹಾಕಿದೆ. ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ, ಹಿರೊಕಾಜು ಮಾಟ್ಸುನೊ ಪ್ರಕಾರ, ಕಾರ್ಯಕ್ರಮದ ಪೋಲೀಸಿಂಗ್‌ಗೆ ಸುಮಾರು 800 ಮಿಲಿಯನ್ ಯೆನ್ ಖರ್ಚು ಮಾಡಲಾಗುವುದು ಎಂದು ಅಂದಾಜಿಸಲಾಗಿದೆ. ಆದರೆ ಗಣ್ಯರಿಗೆ ಆತಿಥ್ಯ ವಹಿಸಲು 600 ಮಿಲಿಯನ್ ಯೆನ್ ವೆಚ್ಚವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಅಂತ್ಯಕ್ರಿಯೆಯ ಮೊತ್ತ 1.7 ಬಿಲಿಯನ್ ಯೆನ್‌ಗೆ ತಲುಪಬಹುದು ಎಂದು ಅವರು ಹೇಳಿರುವುದಾಗಿ ವರದಿ ಹೇಳಿದೆ.

ಇದನ್ನೂ ಓದಿ: 'ಭಾರತ್‌ ಜೋಡೋ' ಯಾತ್ರೆಗೆ ಖ್ಯಾತ ಹಾಲಿವುಡ್‌ ನಟ ಜಾನ್‌ ಕುಸಾಕ್‌ ಬೆಂಬಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News