2ನೇ ವಿಶ್ವಯುದ್ಧದ ಸಂದರ್ಭ ಬ್ರಿಟನ್‌ ಕೈಗಾರಿಕೆಗಳು ಸ್ಥಗಿತಗೊಳ್ಳದಂತೆ ಕಾರ್ಯನಿರ್ವಹಿಸಿದ್ದ ಶತಾಯುಷಿ ಮಹಿಳೆ

Update: 2022-09-25 19:00 GMT
photo source: twitter/@sheffielduni

ಲಂಡನ್, ಸೆ.25: ಎರಡನೆಯ ವಿಶ್ವಯುದ್ಧದ ಸಂದರ್ಭ ಬ್ರಿಟನ್‌ನ ಉಕ್ಕು ಕೈಗಾರಿಕೆಗಳು ಸ್ಥಗಿತಗೊಳ್ಳದಂತೆ ಕಾರ್ಯನಿರ್ವಹಿಸಿದ್ದ 100 ವರ್ಷದ ಮಹಿಳೆಗೆ ಶೆಫೀಲ್ಡ್ ವಿವಿ ಗೌರವ ಪದವಿ ನೀಡಿ ಗೌರವಿಸಿದೆ.

ಎರಡನೆಯ ವಿಶ್ವಯುದ್ಧ ಆರಂಭವಾದಾಗ ಬ್ರಿಟನ್‌ನ ಪುರುಷರೆಲ್ಲರೂ ಯುದ್ಧರಂಗಕ್ಕೆ ತೆರಳಿದ್ದರಿಂದ ಬ್ರಿಟನ್‌ನ ಉಕ್ಕು ಕೈಗಾರಿಕೆಗಳು ಬಂದ್ ಆಗುವ ಅಪಾಯವಿತ್ತು. ಆಗ ಕ್ಯಾಥರಿನ್ ರಾಬರ್ಟ್ಸ್ ಹಾಗೂ ಇತರ ಹಲವು ಮಹಿಳೆಯರಿಗೆ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುವಂತೆ ನಿರ್ದೇಶನ ಬಂದಿತ್ತು. ಅದರಂತೆ 18 ವರ್ಷದ ಕ್ಯಾಥರಿನ್ ದಿನಕ್ಕೆ 10 ಗಂಟೆಗೂ ಅಧಿಕ ಸಮಯ ಕೆಲಸ ನಿರ್ವಹಿಸಿದ್ದರು. ಆದರೆ ಯುದ್ಧ ಮುಗಿದ ಬಳಿಕ ಮಹಿಳಾ ಕಾರ್ಮಿಕರನ್ನು ಮನೆಗೆ ಕಳುಹಿಸಿ ಪುರುಷ ಕಾರ್ಮಿಕರನ್ನು ಮರು ನೇಮಕಗೊಳಿಸಲಾಗಿತ್ತು. ಮಹಿಳಾ ಕಾರ್ಮಿಕರು ಯುದ್ಧದ ಸಂದರ್ಭ ನಿರ್ವಹಿಸಿದ್ದ ಮಹತ್ತರ ಪಾತ್ರವನ್ನು ಗುರುತಿಸುವ ಮತ್ತು ಅವರನ್ನು ಗೌರವಿಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡ ಕ್ಯಾಥರಿನ್, ಇದಕ್ಕಾಗಿ ಅಭಿಯಾನವನ್ನು ಆರಂಭಿಸಿ ಸುಮಾರು 170,000 ಪೌಂಡ್‌ನಷ್ಟು ನಿಧಿ ಸಂಗ್ರಹಿಸಿದ್ದರು.ಕ್ಯಾಥರಿನ್ ಅವರ ಸಾಧನೆಯನ್ನು ಪರಿಗಣಿಸಿ ಗೌರವ ಪದವಿಗೆ ಆಯ್ಕೆ ಮಾಡಿರುವುದಾಗಿ ವಿವಿಯ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News