ಬಿಬಿಎಂಪಿ ಚುನಾವಣೆಗೆ ಸಿದ್ಧತೆ: ಇಂದು ಅಂತಿಮ ಮತದಾರರ ಪಟ್ಟಿ ಪ್ರಕಟ

Update: 2022-09-28 16:41 GMT

ಬೆಂಗಳೂರು, ಸೆ.28: ಮುಂಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ-2022 ರ ಚುನಾವಣೆಗೆ ಸಂಬಂಧಿಸಿದಂತೆ ‘ಅಂತಿಮ ಮತದಾರರ ಪಟ್ಟಿ’ಯನ್ನು ಸಿದ್ಧಗೊಳಿಸಿ, ಸೆ.29ರಂದು ಪ್ರಕಟಿಸಲಾಗುತ್ತದೆ. ಪಾಲಿಕೆಯ 243 ವಾರ್ಡ್‍ಗಳಲ್ಲಿ ಒಟ್ಟು 7919563 ಮತದಾರರಿರುತ್ತಾರೆ. ಅದರಲ್ಲಿ 4114383 ಪುರುಷರು, 3803747 ಮಹಿಳೆಯರು ಹಾಗೂ 1433 ಇತರೆ ಮತದಾರರಿದ್ದಾರೆ. ಸಾರ್ವಜನಿಕರು ತಮ್ಮ ಹಾಗೂ ಕುಟುಂಬ ಸದಸ್ಯರ ಮಾಹಿತಿಯನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ಅಂತಿಮ ಮತದಾರರ ಪಟ್ಟಿಯನ್ನು ಬಿಬಿಎಂಪಿಯ http://www.bbmp.gov.in/ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು. ಎಲ್ಲಾ ಮತದಾರರ ನೊಂದಣಾಧಿಕಾರಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಛೇರಿಗಳಲ್ಲೂ ಹಾಗೂ ವಾರ್ಡ್ ಕಛೇರಿಗಳಲ್ಲೂ ಸಾರ್ವಜನಿಕರ ವೀಕ್ಷಣೆಗೆ ಮಾಹಿತಿ ಲಭ್ಯವಿರಿಸಲಾಗುತ್ತದೆ. ಹೊಸದಾಗಿ ಮತದಾರರಾಗಿ ನೊಂದಾಯಿಸಿಕೊಳ್ಳಲು ಮೊಬೈಲ್ ಆಪ್ ಆದ ‘ವೋಟರ್ ಹೆಲ್ಪ್‍ಲೈನ್ ಆಪ್’ ಮತ್ತು ಓಗಿSP Poಡಿಣಚಿಟ ವೆಬ್‍ಸೈಟ್ ಮುಖೇನಾ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News