ಪಿಎಫ್ಐ ಸಿದ್ದರಾಮಯ್ಯರ ಪಾಪದ ಕೂಸು, ಅವರ ಅಪರಾಧದಿಂದ ಇಷ್ಟೆಲ್ಲ ಅನಾಹುತ: ಯಡಿಯೂರಪ್ಪ

Update: 2022-09-29 07:31 GMT

ಶಿವಮೊಗ್ಗ, ಸೆ.29:  ಪಿಎಫ್ಐ ಸಿದ್ದರಾಮಯ್ಯನವರ ಪಾಪದ ಕೂಸು. ಸಿದ್ದರಾಮಯ್ಯರ ಅಪರಾಧದಿಂದ ಇಷ್ಟೆಲ್ಲ ಅನಾಹುತಗಳಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ಇಡೀ ದೇಶದ ಜನ ನಮ್ಮ ಜತೆಗಿದ್ದಾರೆ. ಅದನ್ನು ನೋಡಿ ಸಿದ್ದರಾಮಯ್ಯರಿಗೆ ಸಹಿಸಲಾಗುತ್ತಿಲ್ಲ. ಏನೂ ತೋಚದೆ ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದಾರೆ. ಅವರಿಗೆ ತಮ್ಮ ತಪ್ಪಿನ ಅರಿವಾಗಿ ನಾಡಿನ ಜನರಿಗೆ ಕ್ಷಮೆ ಕೇಳಬೇಕಿತ್ತು. ಈಗಲಾದರೂ ಸಿದ್ದರಾಮಯ್ಯ ಜಾಗೃತರಾಗಬೇಕು ಎಂದು ಹೇಳಿದರು.

 ಸೊರಬ ಕಾಂಗ್ರೆಸ್ ಮುಖಂಡ ರಾಜು ತಲ್ಲೂರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮಡಿವಾಳ ಸಮಾಜದ ಮುಖಂಡರಾಗಿದ್ದಾರೆ. ಅವರ ಸೇರ್ಪಡೆಯಿಂದ ನಾಲ್ಕು, ಐದು ಕ್ಷೇತ್ರಕ್ಕೆ ಅನುಕೂಲ. ಯಾವುದೇ ಬೇಡಿಕೆ ಇಲ್ಲದೇ ಅವರು ಪಕ್ಷ ಸೇರಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.

ರಾಜ್ಯ ಪ್ರವಾಸ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬಿಎಸ್ವೈ, ಒಂದೆರಡು ದಿನಗಳಲ್ಲಿ ರಾಜ್ಯ ಪ್ರವಾಸದ ಬಗ್ಗೆ ತೀರ್ಮಾನವಾಗಲಿದೆ. ಮುಂದಿನ ನಾಲ್ಕು ದಿನಗಳಲ್ಲಿ ಪ್ರವಾಸ ಕೈಗೊಳುತ್ತೇನೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಪಣದಲ್ಲಿ ನಮ್ಮ ಪಕ್ಷವಿದೆ. ಮೋದಿಯವರ ನೇತೃತ್ವದಲ್ಲಿ ದೇಶ ಸುಭದ್ರವಾಗುತ್ತಾ, ಅಭಿವೃದ್ಧಿಯಾಗುತ್ತಿದೆ. ಹೀಗಾಗಿ, ಬಿಜೆಪಿಯ ತತ್ವ, ಸಿದ್ಧಾಂತ ಹಾಗೂ ಮೋದಿಯವರ ನಾಯಕತ್ವ ಮೆಚ್ಚಿ ಬೇರೆ ಪಕ್ಷದ ಅನೇಕ ಮುಖಂಡರು ನಮ್ಮ ಪಕ್ಷಕ್ಕೆ ಸೇರುತ್ತಿದ್ದಾರೆ. ಇನ್ನೂ ಹಲವು ಮುಖಂಡರು ಬಿಜೆಪಿ ಸೇರುವ ಚಿಂತನೆಯಲ್ಲಿದ್ದಾರೆ. ಇವರುಗಳೆಲ್ಲಾ ಸೇರಿದ ನಂತರ ನಮಗೆ ಮತ್ತಷ್ಟು ಬಲ ಬರುತ್ತದೆ ಎಂದರು.

ಇದನ್ನೂ ಓದಿ: ರಾಜ್ಯದ 40 ಪರ್ಸೆಂಟ್  ಕಮಿಷನ್ ಸರಕಾರ ಗಂಗೊಳ್ಳಿ ಬಂದರಿನಲ್ಲಿ‌‌ ಮುಳುಗಿದೆ: ಸಿದ್ದರಾಮಯ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News