ಪಿಎಫ್‍ಐ ನಿಷೇಧ: ಸರ್ಕಾರದ ಕ್ರಮ ಪರಿಶೀಲಿಸಲು UAPA ಟ್ರಿಬ್ಯುನಲ್ ಮುಖ್ಯಸ್ಥರಾಗಿ ದಿಲ್ಲಿ ಹೈಕೋರ್ಟ್ ಜಡ್ಜ್ ನೇಮಕ

Update: 2022-10-06 16:00 GMT
Photo: PTI

 ಹೊಸದಿಲ್ಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತದರ ಸಹ ಸಂಘಟನೆಗಳಿಗೆ ಕೇಂದ್ರ ಸರ್ಕಾರ ವಿಧಿಸಿರುವ ಐದು ವರ್ಷಗಳ ನಿಷೇಧವನ್ನು ಪರಿಶೀಲಿಸಲಿರುವ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯ ಟ್ರಿಬ್ಯುನಲ್ ಮುಖ್ಯಸ್ಥರಾಗಿ ದಿಲ್ಲಿ ಹೈಕೋರ್ಟಿನ ನ್ಯಾಯಾಧೀಶ ಜಸ್ಟಿಸ್ ದಿನೇಶ್ ಕುಮಾರ್ ಶರ್ಮ ಅವರನ್ನು ಸರ್ಕಾರ ಇಂದು ನೇಮಕಗೊಳಿಸಿದೆ.

2007ರಲ್ಲಿ ದಕ್ಷಿಣದ ಮೂರು ಮುಸ್ಲಿಂ ಸಂಘಟನೆಗಳ ವಿಲೀನದೊಂದಿಗೆ ಸ್ಥಾಪನೆಗೊಂಡ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಮತ್ತದರ ಸಹಸಂಘಟನೆಗಳ ಮೇಲೆ ಕೇಂದ್ರ ಸರಕಾರ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯಡಿ ಸೆಪ್ಟೆಂಬರ್ 28 ರಂದು ನಿಷೇಧ ಹೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News