×
Ad

ಭ್ರಷ್ಟಾಚಾರದ ಇನ್ನೊಂದು ಹೆಸರೇ ಕಾಂಗ್ರೆಸ್: ನಳಿನ್ ಕುಮಾರ್ ಕಟೀಲ್

Update: 2022-10-11 12:26 IST

ಹಾವೇರಿ : 'ದೇಶದಲ್ಲಿ ಭ್ರಷ್ಟಾಚಾರವನ್ನು ಪ್ರಾರಂಭ ಮಾಡಿದ್ದೇ ಕಾಂಗ್ರೆಸ್. ಭ್ರಷ್ಟಾಚಾರದ ಇನ್ನೊಂದು ಹೆಸರೇ ಕಾಂಗ್ರೆಸ್.  ಭ್ರಷ್ಟಾಚಾರದ ಒಂದು ಫಲಾನುಭವಿ ರಾಹುಲ್ ಗಾಂಧಿಯಾಗಿದ್ದು, ಅದಕ್ಕೋಸ್ಕರ ಅವರು ಜಾಮೀನಿನ ಮೇಲಿದ್ದಾರೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ದೇಶದಲ್ಲಿ ಭ್ರಷ್ಟಾಚಾರವನ್ನು ಪ್ರಾರಂಭ ಮಾಡಿದ್ದೆ ಈ ರಾಹುಲ್ ಗಾಂಧಿಯವರ ತಾತ. ಭಯೋತ್ಪಾದನೆಯ ಇನ್ನೊಂದು ಹೆಸರು ಕಾಂಗ್ರೆಸ್ಸೇ ಆಗಿದೆ' ಎಂದರು.

ಎಸ್ಸಿ ಮತ್ತು ಎಸ್‍ಟಿ ಮೀಸಲಾತಿ ಹೆಚ್ಚಳ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಬಹುಮತ ಪಡೆದು ಐದು ವರ್ಷ ಮುಖ್ಯಮಂತ್ರಿ ಆಗಿದ್ದರು. ಅಷ್ಟೇ ಅಲ್ಲದೇ ಅವರು ಅಹಿಂದ್ ಹೋರಾಟ ಮಾಡಿ ಆ ಕೋಟಾದ ಭೀಕ್ಷೆಯಲ್ಲಿ ಮುಖ್ಯಮಂತ್ರಿ ಆಗಿದ್ದರು. ಅವರ ಅಧಿಕಾರವಧಿಯಲ್ಲಿ ಹಿಂದುಳಿದ ಸಮಾಜಗಳಿಗೆ ನ್ಯಾಯ ಕೊಡದಿದ್ದವರು, ಈಗ ಮೀಸಲಾತಿ ಕೊಟ್ಟಾಗ ಅಸಮಾಧಾನದ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಯಾದಗಿರಿ | ಬೌದ್ಧ ಧರ್ಮಕ್ಕೆ ಮತಾಂತರಕ್ಕೆ ನಿರ್ಧಾರ: ಹಿಂದೂ ದೇವರ ಚಿತ್ರ ನದಿಯಲ್ಲಿ ವಿಸರ್ಜನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News