ಬೆಂಗಳೂರು: ಇಂದೂ ಕೂಡ ಆ್ಯಪ್ ಆಧಾರಿತ ಆಟೋಗಳ ಓಡಾಟ ಮುಂದುವರಿಕೆ, ತಗ್ಗದ ದರ..!

Update: 2022-10-12 17:51 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.12: ಆ್ಯಪ್ ಆಧಾರಿತ ಆಟೊ ಸೇವೆ ಬಂದ್ ಮಾಡಬೇಕೆಂದು ಸಾರಿಗೆ ಇಲಾಖೆ ಆದೇಶಿಸಿದ್ದರೂ, ಓಲಾ, ಊಬರ್ ಆ್ಯಪ್ ಕಂಪೆನಿಗಳು ಕಿಮ್ಮತ್ತು ನೀಡದೆ ಸೇವೆ ಮುಂದುವರೆಸಿವೆ.

ಬುಧವಾರದಿಂದ ಆ್ಯಪ್ ಆಧಾರಿತ ಆಟೊ ಸೇವೆ ನಿಲ್ಲಿಸಬೇಕೆಂದು ಸಾರಿಗೆ ಆಯುಕ್ತ ಟಿ.ಎಚ್.ಎಂ.ಕುಮಾರ್ ನಿನ್ನೆ ಸಭೆ ನಡೆಸಿ ಸೂಚಿಸಿದ್ದರು. ಆದರೆ, ಬಹುತೇಕ ಚಾಲಕರು ಆ್ಯಪ್ ಮೂಲಕ ಸಂಪರ್ಕಿಸಿ ಸೇವೆ ನೀಡಿದ್ದಾರೆ.

ಪ್ರಯಾಣಿಕರಿಗೆ ಆ್ಯಪ್ ಆಧಾರಿತ ಆಟೊ ಸೇವೆ ಬಂದ್ ಕುರಿತು ಮಾಹಿತಿ ಇಲ್ಲದ ಕಾರಣ, ನೋಂದಣಿ ಮಾಡಿಕೊಂಡು ಪ್ರಯಾಣ ಬೆಳೆಸಿದ್ದಾರೆ. ಮತ್ತೊಂದೆಡೆ, ಕೆಲ ಆಟೊ ಚಾಲಕರು ಆ್ಯಪ್ ಬಂದ್ ಆಗಿದೆ ಎಂದು ದುಪ್ಪಟ್ಟು ಹಣ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. 

ತೊಂದರೆ: ಸಾರಿಗೆ ಇಲಾಖೆ ಕ್ರಮವನ್ನು ಟೀಕಿಸಿರುವ ಹಲವರು, ಆ್ಯಪ್ ಆಧರಿಸಿ ಆಟೊದಲ್ಲಿ ಹೋಗುವವರಿಗೆ ತೊಂದರೆ ಆಗಿದೆ. ಸಾಮಾನ್ಯ ಆಟೊ ಸೇವೆಗಿಂತ ಆ್ಯಪ್ ಆಧರಿಸಿದ ಆಟೊ ಸೇವೆಯೇ ಅತ್ಯುತ್ತಮ. ಹೀಗಾಗಿ, ಆ್ಯಪ್ ಆಧರಿಸಿ ಆಟೊ ಸೇವೆ ರದ್ದು ಮಾಡಿರುವುದು ಸರಿಯಲ್ಲ, ಬದಲಿ ಮಾರ್ಗ ಕಂಡುಕೊಳ್ಳಬಹುದಿತ್ತು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News