ಉತ್ತರಪ್ರದೇಶ: ಶಾಲಾ ಶುಲ್ಕ ಕಟ್ಟದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ನಿರಾಕರಣೆ; ಕಣ್ಣೀರಿಟ್ಟ ಬಾಲಕಿ

Update: 2022-10-19 03:18 GMT

इस बेटी के आंसू उन लाखों बच्चों की संयुक्त पीड़ा बता रहे हैं जिन्हें फीस न जमा होने के कारण उपहास झेलना पड़ता है।

आर्थिक तंगी बच्चों की शिक्षा में रोड़ा ना बने यह हर जिले के अधिकारियों व जनप्रतिनिधियों की नैतिक जिम्मेदारी है।

निजी संस्थान मानवता न भूलें, शिक्षा व्यापार नहीं है। pic.twitter.com/GZL9RwSICB

— Varun Gandhi (@varungandhi80) October 18, 2022

ಹೊಸದಿಲ್ಲಿ: ಯುಪಿಯ ಉನ್ನಾವೊ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ಶುಲ್ಕ ಪಾವತಿಸದ ಕಾರಣಕ್ಕೆ ಪರೀಕ್ಷೆ ಬರೆಯಲು ಅನುಮತಿ ಸಿಗದ ಹಿನ್ನೆಲೆಯಲ್ಲಿ ಬಾಲಕಿಯೊಬ್ಬಳು ಅಳುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಹಂಚಿಕೊಂಡಿರುವ ಬಿಜೆಪಿ ಸಂಸದ ವರುಣ್‌ ಗಾಂಧಿ ಸರಕಾರಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳನ್ನು ನೈತಿಕ ಹೊಣೆಗಾರರೆಂದು ಹೇಳಿದ್ದಾರೆ. 

"ಈ ಮಗಳ ಕಣ್ಣೀರು ಶುಲ್ಕ ಪಾವತಿಸದೆ ಅವಮಾನವನ್ನು ಎದುರಿಸಬೇಕಾದ ಲಕ್ಷಾಂತರ ಮಕ್ಕಳ ನೋವನ್ನು ತೋರಿಸುತ್ತದೆ" ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. "ಆರ್ಥಿಕ ಅಡಚಣೆಗಳು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಪ್ರತಿ ಜಿಲ್ಲೆಯ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳ ನೈತಿಕ ಹೊಣೆಗಾರಿಕೆಯಾಗಿದೆ" ಎಂದು ಅವರು ಹೇಳಿದ್ದಾರೆ, ಅಲ್ಲದೆ, ತಮ್ಮದೇ ಪಕ್ಷದ ಸರ್ಕಾರದಿಂದ ಉತ್ತರವನ್ನು ಕೇಳಿದ್ದಾರೆ.

ಖಾಸಗಿ ಸಂಸ್ಥೆಗಳಿಗೆ ‘ಮಾನವೀಯತೆ ಮರೆಯಬೇಡಿ ಶಿಕ್ಷಣ ವ್ಯಾಪಾರವಲ್ಲ’ ಎಂದು ಅವರು ಹೇಳಿದ್ದಾರೆ.


ಉನ್ನಾವ್‌ನ ಬಂಗಾರ್‌ಮೌ ಬಳಿಯ ಟೋಲಾ ಎಂಬ ಗ್ರಾಮಾಂತರ ಪಟ್ಟಣದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಲ್ಲಿನ ಖಾಸಗಿ ಶಾಳೆಯೊಂದರಲ್ಲಿ ಫೀಸು ಕಟ್ಟದ ವಿದ್ಯಾರ್ಥಿಗಳನ್ನು ಶಾಲೆಯ ಗೇಟ್‌ಗಳ ಹೊರಗೆ ಇರಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಶಾಲೆಗೆ ಅನುಮತಿ ನೀಡದ್ದರಿಂದ ಸೋಮವಾರ ನಡೆದ ಮಧ್ಯ ವರ್ಷದ ಪರೀಕ್ಷೆಯನ್ನು ಬರೆಯಲು ಸಾಧ್ಯವಾಗದೆ ವಿದ್ಯಾರ್ಥಿನಿಯೊಬ್ಬಳು ಅಳುತ್ತಿರುವ ವಿಡಿಯೋ ವೈರಲ್‌ ಆಗಿದೆ. 
"ಪಾಪಾ ಇಂದು ಶುಲ್ಕದೊಂದಿಗೆ ಬರುತ್ತಾರೆ ಎಂದು ನಾನು (ಶಾಲಾ ನಿರ್ವಹಣೆ ಮಂಡಳಿಯ ಬಳಿ) ಹೇಳಿದೆ, ಆದರೆ ಅವರು ನಮ್ಮನ್ನು ಹೊರಗೆ ತಳ್ಳಿದರು" ಎಂದು 6 ನೇ ತರಗತಿಯಲ್ಲಿರುವ ವಿದ್ಯಾರ್ಥಿನಿ ಅಪೂರ್ವ ಸಿಂಗ್ ಹೇಳಿದ್ದಾರೆ.

ಸ್ಥಳೀಯ ಬಿಜೆಪಿ ಕಾರ್ಯಕರ್ತೆಯೊಬ್ಬರು ನಂತರ ಶಾಲೆಯ ಬಾಲ ವಿದ್ಯಾ ಮಂದಿರದಲ್ಲಿ ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ (ರೂ 3,000) ಆ ವಿದ್ಯಾರ್ಥಿನಿಯ ಬಾಕಿ ಶುಲ್ಕವನ್ನು ಪಾವತಿಸಿದ್ದಾರೆ.

ಸಾರ್ವಜನಿಕರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಶಾಲಾ ಆಡಳಿತ ಮಂಡಳಿಯು ಶುಲ್ಕ ಪಾವತಿಯ ಸ್ಥಿತಿಯನ್ನು ಲೆಕ್ಕಿಸದೆ, ಈ ವಿದ್ಯಾರ್ಥಿಗಳು ತಪ್ಪಿದ ಪರೀಕ್ಷೆಯನ್ನು ಬರೆಯಲು ಅವಕಾಶವನ್ನು ಪಡೆಯುತ್ತಾರೆ ಎಂದು ಹೇಳಲಾಗಿದೆ. ಉಳಿದ ವಿದ್ಯಾರ್ಥಿಗಳು ಯಾವ ತರಗತಿಯಲ್ಲಿದ್ದಾರೆ, ಅವರ ಬಾಕಿ ಎಷ್ಟು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News