ಪಕ್ಷದಲ್ಲಿ ನನ್ನ ಪಾತ್ರವನ್ನು ನೂತನ ಕಾಂಗ್ರೆಸ್ ಅಧ್ಯಕ್ಷರೇ ನಿರ್ಧರಿಸುತ್ತಾರೆ:ರಾಹುಲ್ ಗಾಂಧಿ

Update: 2022-10-19 18:11 GMT

ಅದೋನಿ (ಆಂಧ್ರಪ್ರದೇಶ),ಅ.19: ಕಾಂಗ್ರೆಸ್‌ನಲ್ಲಿ ಅಧ್ಯಕ್ಷರು(President) ಸರ್ವೋಚ್ಚ ಸ್ಥಾನವನ್ನು ಹೊಂದಿದ್ದಾರೆ ಮತ್ತು ಆ ಹುದ್ದೆಗೆ ಆಯ್ಕೆಯಾದವರು ಪಕ್ಷದ ಮುಂದಿನ ಪಥವನ್ನು ನಿರ್ಧರಿಸುತ್ತಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ(Rahul Gandhi)ಯವರು ಬುಧವಾರ ಇಲ್ಲಿ ಹೇಳಿದರು.

ಭಾರತ ಜೋಡೋ ಯಾತ್ರೆ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಹುಲ್,‘ನನ್ನ ಪಾತ್ರವೇನು ಮತ್ತು ನನ್ನನ್ನು ಹೇಗೆ ನಿಯೋಜಿಸಲಾಗುವುದು ಎನ್ನವುದನ್ನು ನೂತನ ಅಧ್ಯಕ್ಷರು ನಿರ್ಧರಿಸುತ್ತಾರೆ ’ ಎಂದು ತಿಳಿಸಿದರು.

 ನೀವು ನೂತನ ಅಧ್ಯಕ್ಷರಿಗೆ ವರದಿ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ರಾಹುಲ್,‘ಖಂಡಿತವಾಗಿಯೂ.ಕಾಂಗ್ರೆಸ್‌ನಲ್ಲಿ ಅಧ್ಯಕ್ಷರು ಪರಮಾಧಿಕಾರ ಹೊಂದಿದ್ದಾರೆ ಮತ್ತು ಪ್ರತಿಯೊಬ್ಬರೂ ಅವರಿಗೆ ವರದಿ ಮಾಡಿಕೊಳ್ಳುತ್ತಾರೆ. ನನ್ನ ಪಾತ್ರದ ಕುರಿತಂತೆ ನಾನು ಅತ್ಯಂತ ಸ್ಪಷ್ಟವಾಗಿದ್ದೇನೆ, ನನ್ನ ಪಾತ್ರವನ್ನು ಮತ್ತು ನಿಯೋಜನೆಯನ್ನು ಕಾಂಗ್ರೆಸ್ ಅಧ್ಯಕರು ನಿರ್ಧರಿಸುತ್ತಾರೆ ’ಎಂದು ಉತ್ತರಿಸಿದರು.

ಖರ್ಗೆ ಮತ್ತು ಶಶಿ ತರೂರ್ ಅನುಭವಿ ಮತ್ತು ತಿಳುವಳಿಕೆಯುಳ್ಳ ನಾಯಕರಾಗಿದ್ದಾರೆ,ಅವರಿಗೆ ತನ್ನ ಸಲಹೆಯ ಅಗತ್ಯವಿಲ್ಲ ಎಂದರು.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ತರೂರ್ ಆರೋಪ ಕುರಿತು ಪ್ರಶ್ನೆಗೆ ಅವರು,ಅದನ್ನು ನಿಭಾಯಿಸಲು ಪಕ್ಷವು ಸಾಂಸ್ಥಿಕ ಚೌಕಟ್ಟನ್ನು ಹೊಂದಿದೆ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News