​ನಾವು ಶಾಂತಿ, ಭಾತೃತ್ವ ಬಯಸುತ್ತೇವೆ : ಆರ್‌ಎಸ್‌ಎಸ್ ನಾಯಕ ಇಂದ್ರೇಶ್ ಕುಮಾರ್

Update: 2022-10-23 18:18 GMT

ಹೊಸದಿಲ್ಲಿ, ಅ. 23: ಆರೆಸ್ಸೆಸ್‌ನ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಹಾಗೂ ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಪೋಷಕ ಇಂದ್ರೇಶ್ ಕುಮಾರ್ ಅವರು ಶನಿವಾರ ಹೊಸದಿಲ್ಲಿಯಲ್ಲಿರುವ ಹಝ್ರತ್ ನಿಝಾಮುದ್ದೀನ್ ದರ್ಗಾಕ್ಕೆ ಭೇಟಿ ನೀಡಿದರು ಹಾಗೂ ದೀಪಾವಳಿ ಹಿನ್ನೆಲೆಯಲ್ಲಿ ದರ್ಗಾದ ಆವರಣದ ಒಳಗೆ ಹಣತೆ ಹಚ್ಚಿದರು.

ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಅವರು ದಿಲ್ಲಿಯಲ್ಲಿರುವ ಹಝ್ರತ್ ನಿಝಾಮುದ್ದೀನ್ ದರ್ಗಾಕ್ಕೆ ನಿನ್ನೆ ತಲುಪಿದರು. ಅಲ್ಲದೆ, ಅವರು ಸೂಫಿ ಸಂತರ ದರ್ಗಾದಲ್ಲಿ ಹೂವು ಹಾಗೂ ಚಾದರವನ್ನು ಅರ್ಪಿಸಿದರು.

‘‘ದೀಪಾವಳಿಯನ್ನು ಭಾರತ ಸೇರಿದಂತೆ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ದೀಪಾವಳಿ ಪ್ರತಿ ಮನೆಯಲ್ಲೂ ಸಂತಸ ಹಾಗೂ ಸಮೃದ್ಧಿ ತರಲಿ. ಈ ಹಬ್ಬ ಪ್ರಾಂತ್ಯಗಳ ಭಿನ್ನತೆ ಹಾಗೂ ಎಲ್ಲಾ ಧರ್ಮಗಳ ಭಿನ್ನತೆಯನ್ನು ಅಳಿಸಲಿ’’ ಎಂದು ಅವರು ಹೇಳಿದರು.

ಭಾರತ ಯಾತ್ರಿಗಳ, ಹಬ್ಬಗಳ ಹಾಗೂ ಮೇಳಗಳ ಭೂಮಿ. ನಾವೆಲ್ಲರೂ ಬಡವರಿಗೆ ಆಹಾರ ನೀಡಬೇಕು ಹಾಗೂ ನಮ್ಮ ನಡುವೆ ಭಾತೃತ್ವ ಹೆಚ್ಚಬೇಕು. ನಾವು ಧರ್ಮಾಂಧತೆ, ದುರುದ್ದೇಶ, ದ್ವೇಷ, ಗಲಭೆ ಅಥವಾ ಯುದ್ಧವನ್ನು ಬಯಸುವುದಿಲ್ಲ ಎಂದು ಪ್ರತಿಯೊಂದು ಹಬ್ಬ ಕೂಡ ಸಾರಿ ಹೇಳುತ್ತದೆ. ನಾವು ಶಾಂತಿ, ಸಾಮರಸ್ಯ ಹಾಗೂ ಭಾತೃತ್ವವನ್ನು ಬಯಸುತ್ತೇವೆ’’ ಎಂದು ಇಂದ್ರೇಶ್ ಕುಮಾರ್ ಹೇಳಿದರು.

‘‘ಯಾರೊಬ್ಬರು ಮತಾಂತರಗೊಳ್ಳುವಂತೆ ಹಾಗೂ ಹಿಂಸೆಯಲ್ಲಿ ಪಾಲ್ಗೊಳ್ಳುವತೆ ಒತ್ತಾಯ ಮಾಡಬಾರದು. ಪ್ರತಿಯೊಬ್ಬರು ಅವರ ಧರ್ಮ ಹಾಗೂ ಜಾತಿಯನ್ನು ಅನುಸರಿಸಬೇಕು. ಇತರ ಧರ್ಮಗಳನ್ನು ಟೀಕಿಸಬಾರದು, ಅವಮಾನಿಸಬಾರದು. ದೇಶದಲ್ಲಿ ಎಲ್ಲ ಧರ್ಮಗಳನ್ನು ಗೌರವಿಸಿದರೆ, ಶುಕ್ರವಾರ ಕಲ್ಲು ತೂರಾಟ ನಡೆಸುವ ಮೂಲಭೂತವಾದಿಗಳಿಂದ ದೇಶ ಮುಕ್ತವಾಗುತ್ತದೆ. ಎಲ್ಲ ಧಮಗಳನ್ನು ಸ್ವೀಕರಿಸುವ ಹಾಗೂ ಗೌರವ ನೀಡುವ ಏಕೈಕ ದೇಶ ಭಾರತ’’ ಎಂದು ಇಂದ್ರೇಶ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News