​ಗಲಭೆಗೆ ಇಂದು ಕೊನೆಯ ದಿನ: ರೆವೆಲ್ಯೂಶನರಿ ಗಾರ್ಡ್ಸ್ ಎಚ್ಚರಿಕೆ

Update: 2022-10-29 17:11 GMT

ಟೆಹರಾನ್,ಅ.29: ಖುರ್ದಿಷ್ ಮಹಿಳೆ ಮಹ್ಸಾ ಅಮಿನಿಯ(Mahsa Amini) ಸಾವಿನ ಬಳಿಕ ಇರಾನ್ ವಿವಿಧೆಡೆ ಪ್ರತಿಭಟನೆಗೆಳು ಮುಂದುವರಿದಿರುವಂತೆಯೇ, ಇರಾನಿನ ರೆವೆಲ್ಯೂಶನರಿ ಗಾರ್ಡ್ಸ್ (Revolutionary Guards)ಸೇನೆಯು ಶನಿವಾರ ಹೇಳಿಕೆಯೊಂದನ್ನು ನೀಡಿ, ಇನ್ನು ಮುಂದೆ ಗಲಭೆ ನಿರತರನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕುವುದಾಗಿ ಎಚ್ಚರಿಕೆ ನೀಡಿದೆ.


 ‘‘ನಾಳೆಯಿಂದ ಯಾರೂ ಬೀದಿಗಿಳಿಯದಿರಿ, ಇಂದು ಗಲಭೆಗಳಿಗೆ ಕೊನೆಯ ದಿನವಾಗಿದೆ’’ ("From tomorrow no one will take to the streets, today is the last day for riots")ಎಂದು ರೆವೆಲ್ಯೂಶನರಿ ಗಾರ್ಡ್ಸ್ನ ಕಮಾಂಡರ್ ಹೊಸೈನ್ ಸಲಾಮಿ ತಿಳಿಸಿದ್ದಾರೆ.


 ಪಶ್ಚಿಮ ಇರಾನ್ನ ನಗರವಾದ ಝಹಾದೆನ್ನಲ್ಲಿ ಭದ್ರತಾಪಡೆಗಳು ಪ್ರತಿಟನಕಾರರ ಮೇಲೆ ಗುಂಡುಹಾರಿಸಿದ ದಿನವೇ ಸಲಾಮಿ ಅವರು ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ. ಗುಂಡೆಸೆತದಲ್ಲಿ ಇಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿತ್ತು.
 ಮಹ್ಸಾ ಅಮೀನಿ ಸಾವನ್ನು ವಿರೋಧಿಸಿ ಸೆಪ್ಟೆಂಬರ್ 30ರಿಂದ ಭುಗಿಲೆದ್ದ ಹಿಂಸಾಚಾರದಿಂದ ಝೆಹ್ದೆನ್ ಪ್ರಾಂತವೊಂದರಲ್ಲಿಯೇ ಸುಮಾರು 100 ಮಂದಿ ಸಾವನ್ನಪ್ಪಿದ್ದರು.

Similar News