BBMP ಸೇರಿದಂತೆ ಸರಕಾರಿ ಕಚೇರಿಗಳಿಂದ ಕೋಟ್ಯಂತರ ರೂಪಾಯಿ ವಿದ್ಯುತ್ ಬಿಲ್ ಬಾಕಿ; ವಾರದ ಗಡುವು ನೀಡಿದ ಬೆಸ್ಕಾಂ

Update: 2022-11-03 16:39 GMT

ಬೆಂಗಳೂರು, ನ. 3: ಬಿಬಿಎಂಪಿ ಸೇರಿದಂತೆ ಹಲವಾರು ಸರಕಾರಿ ಕಚೇರಿಗಳೇ ಕೋಟ್ಯಂತರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಮಾಹಿತಿ ಹೊರಬಂದಿದೆ.

ಬಿಬಿಎಂಪಿ, ಬಿಡಿಎ ಹಾಗೂ ಜಲಮಂಡಳಿ ಸೇರಿದಂತೆ ಅನೇಕ ಸರಕಾರ ಸಂಸ್ಥೆಗಳೇ ಸುಮಾರು 93 ಕೋಟಿ ರೂ.ಗಳಷ್ಟು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದು ಇದೀಗ ಬಹಿರಂಗಗೊಂಡಿದೆ. ಈ ಸಂಬಂಧ 7 ದಿನಗಳ ಒಳಗಾಗಿ ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುವುದು ಎಂದು ಬೆಸ್ಕಾಂ ಎಚ್ಚರಿಕೆ ನೀಡಿದೆ.

ಅದರಲ್ಲೂ ಬೆಸ್ಕಾಂ ಜಯನಗರ ಉಪ ವಿಭಾಗದಲ್ಲಿರುವ ಹಲವಾರು ಸರಕಾರಿ ಕಚೇರಿಗಳು ಸುಮಾರು 93.70 ಕೋಟಿ ರೂ.ಗಳಷ್ಟು ವಿದ್ಯುತ್ ಬಾಕಿ ಉಳಿಸಿಕೊಂಡಿವೆ. ಹಾಗೇ ಜಯನಗರ, ಹೊಸೂರು ರಸ್ತೆ, ಇಸ್ರೋ ಲೇಔಟ್, ಜೆ.ಪಿ.ನಗರ, ಪದ್ಮನಾಭನಗರ, ಕತ್ರಿಗುಪ್ಪೆ, ಉತ್ತರಹಳ್ಳಿ ವ್ಯಾಪ್ತಿಯಲ್ಲಿನ ಕಚೇರಿಗಳು 2022ರ ಸೆಪ್ಟೆಂಬರ್ ಅಂತ್ಯದವರೆಗೆ 93.70 ಕೋಟಿ ರೂ, ವಿದ್ಯುತ್ ಶುಲ್ಕ ಪಾವತಿಸಬೇಕಾಗಿದೆ ಎಂದು ತಿಳಿದುಬಂದಿದೆ.

Similar News