ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 5 ದಂಪತಿಗಳನ್ನು ಒಂದುಗೂಡಿಸಿದ ತುಮಕೂರು ಕೌಟುಂಬಿಕ ನ್ಯಾಯಾಲಯ

Update: 2022-11-14 04:26 GMT

ತುಮಕೂರು, ನ.14: ತುಮಕೂರು ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇದ್ದ ವಿವಿಧ ಪ್ರಕರಣಗಳಲ್ಲಿ 5 ಜೋಡಿಗಳನ್ನು ಮತ್ತೇ ಒಂದು ಮಾಡಿ ಹಾರ ಬದಲಾಯಿಸಿ ಒಬ್ಬರಿಗೊಬ್ಬರು ಸಿಹಿ ತಿನ್ನಿಸಿದ ಅಪರೂಪದ ಪ್ರಸಂಗಕ್ಕೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಸಾಕ್ಷಿಯಾಯಿತು.

ಶನಿವಾರ ನಡೆದ ಲೋಕ್ ಅದಾಲತ್ ನಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳಲ್ಲಿ, ದಂಪತಿಗಳಲ್ಲಿ ಚಿಕ್ಕ ಚಿಕ್ಕ ಮನಸ್ತಾಪಗಳು, ವೈಮನಸ್ಯಗಳು ಇದ್ದವು. ಅದಕ್ಕೆ ಜೀವನಾಂಶ, ವಿಚ್ಛೇದನಕ್ಕೆ ಅರ್ಜಿ ಹಾಕಿ ನ್ಯಾಯಾಲಯಕ್ಕೆ ಬಂದಿದ್ದ ದಂಪತಿಗಳ ಪೈಕಿ 5 ದಂಪತಿಗಳನ್ನು ನ್ಯಾಯಾಧೀಶರು, ಮಧ್ಯಸ್ಥಿಕೆದಾರರು, ಎರಡೂ ಕಡೆಯ ವಕೀಲರು ಸೇರಿ ಬುದ್ಧಿ ಹೇಳಿ ಒಂದು ಮಾಡಿ, ಪ್ರಕರಣವನ್ನು ಮುಕ್ತಾಯ ಮಾಡಿ ಕಳಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಒಂದು ಪ್ರಕರಣದಲ್ಲಿ 60 ವರ್ಷ ಮೇಲ್ಪಟ್ಟ ವೃದ್ಧರು ಸಹ ಬೇರೆ ಬೇರೆಯಾಗಿದ್ದನ್ನು ಗಮನಿಸಿದ ನ್ಯಾಯಾಧೀಶರು ಕಕ್ಷಿದಾರರ ವಕೀಲರು ಮತ್ತು ಕಕ್ಷಿದಾರರಿಗೆ ಮನವಿ ಮಾಡಿ ಪ್ರಕರಣವನ್ನು ಮುಕ್ತಾಯಗೊಳಿಸಿದರು.

ಇದನ್ನೂ ಓದಿ... ಹುಣಸೂರು | ಬ್ಯಾಂಕ್‌ನಿಂದ ಪದೇ ಪದೇ ನೋಟಿಸ್ ಆರೋಪ; ದಯಾಮರಣಕ್ಕೆ ಒತ್ತಾಯಿಸಿ ರಾಷ್ಟ್ರಪತಿಗೆ ವೃದ್ಧೆ ಮನವಿ

ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಬಿ.ಗೀತಾ, ಪೊಕ್ಸೊ ನ್ಯಾಯಾಲಯದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂಧ್ಯಾರಾವ್.ಪಿ, ಕೌಟುಂಬಿಕ ನ್ಯಾಯಾಲಯದ 1ನೇ ಅಧಿಕ ಪ್ರಧಾನ ಜಿಲ್ಲಾ ನ್ಯಾಯಾಧೀಶ ಎನ್.ಮುನಿರಾಜ ಮತ್ತು 3ನೇ ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶರಾದ ಇರ್ಫಾನ್, ನರಸಿಂಹಪ್ಪ, ವಕೀಲರು ಹಾಜರಿದ್ದರು.

Similar News