ಕಾಪು: ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ

Update: 2022-11-21 12:56 GMT

ಕಾಪು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಇಲ್ಲಿ 1 ಕೋಟಿ ಮೊತ್ತದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಕಾಲೇಜಿನ ವಿಸ್ಕøತ ಕಟ್ಟಡ ಮುತ್ತು ಇದರ ಶಿಲಾನ್ಯಾಸವನ್ನು ಸೋಮವಾರ ಶಾಸಕ ಲಾಲಾಜಿ ಆರ್. ಮೆಂಡನ್ ನೆರವೇರಿಸಿದರು. 

ಈ ಕಟ್ಡಡದ ನೆಲಮಹಡಿ 210.14 ಚದರ ಅಡಿ ಆಗಿದ್ದು, ಮೊದಲ ಮಹಡಿಯು166.73 ಚದರ ಅಡಿಯೊಂದಿಗೆ ಒಟ್ಟು 376.87 ಚದರ ಅಡಿ ಹೊಂದಿದೆ. ಮುಂದಿನ ವರ್ಷದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ.

ಬಳಿಕ ಮಾತನಾಡಿದ ಶಾಸಕ ಲಾಲಾಜಿ ಆರ್. ಮೆಂಡನ್, ಕಾಪುವಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಗೊಂಡು 30 ವರ್ಷಗಳಾಗಿವೆ. ಈಗಾಗಲೇ ಆರು ಕೋಟಿ ರೂ. ವೆಚ್ಚದಲ್ಲಿ ಕಾಜೇಜು ಕಟ್ಟಡಕ್ಕೆ ವಿನಿಯೋಗಿಸಲಾಗಿದೆ. ಇನ್ನಷ್ಟು ಅನುದಾನವನ್ನು ಕಾಲೇಜಿನ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.  

ಕಾರ್ಯಕ್ರಮದಲ್ಲಿ ಚಲನಚಿತ್ರ ನಟರಾದ ಭೋಜರಾಜ ವಾಮಂಜೂರು,  ಕಾಲೇಜಿನ ಪ್ರಾಂಶುಪಾಲರಾದ ಸ್ಟೀವನ್ ಕ್ವಾಡ್ರಸ್, ಕಾಪು ಯೋಜನಾ ಪ್ರಾಧಿಕಾರ ಅಧ್ಯಕ್ಷ ಸುಧಾಮ ಶೆಟ್ಟಿ, ಪುರಸಭೆ ಸದಸ್ಯರು -ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಅನಿಲ್ ಕುಮಾರ್, ನಾಗೇಶ್ ಕುಮಾರ್, ಹರಿಣಿ ದೇವಾಡಿಗ, ಗಂಗಾಧರ್ ಸುವರ್ಣ, ಚಂದ್ರ ಮಲ್ಲಾರು, ಶೇಕ್ ನಝಿರ್, ಕಾಲೇಜಿನ  ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರೊಶ್ಚಿ ಯಶ್ವಂತ್ ಉಪಸ್ಥಿತರಿದ್ದರು. 

Similar News