ಪ್ರಜಾಸತ್ತಾತ್ಮಕ ಚರ್ಚೆಗಳ ನಂತರ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಿಜೆಪಿ ಬದ್ಧ: ಅಮಿತ್ ಶಾ

Update: 2022-11-24 09:31 GMT

ಹೊಸದಿಲ್ಲಿ: ಎಲ್ಲಾ ಪ್ರಜಾಸತ್ತಾತ್ಮಕ ಚರ್ಚೆಗಳು ಮುಗಿದ ನಂತರ ಏಕರೂಪ ನಾಗರಿಕ ಸಂಹಿತೆ(ಯುಸಿಸಿ )ಯನ್ನು ಜಾರಿಗೆ ತರಲು ಬಿಜೆಪಿ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ Union Home Minister Amit Shah  ಗುರುವಾರ ಹೇಳಿದ್ದಾರೆ.

ಯುಸಿಸಿ ಬಗ್ಗೆ ಕೇಳಿದಾಗ, ಇದು ಜನಸಂಘದ ದಿನಗಳಿಂದ ಈ ದೇಶದ ಜನರಿಗೆ ಬಿಜೆಪಿಯ ಭರವಸೆಯಾಗಿದೆ ಎಂದು ಶಾ ಹೇಳಿದರು.

“ಬಿಜೆಪಿ ಮಾತ್ರವಲ್ಲ, ಸಂವಿಧಾನ ಸಭೆ ಕೂಡ  ಸಂಸತ್ತು ಹಾಗೂ  ರಾಜ್ಯಗಳಿಗೆ ಸೂಕ್ತ ಸಮಯದಲ್ಲಿ ಯುಸಿಸಿ ತರಲು ಸಲಹೆ ನೀಡಿತ್ತು. ಏಕೆಂದರೆ ಯಾವುದೇ ಜಾತ್ಯತೀತ ದೇಶಕ್ಕೆ ಕಾನೂನುಗಳು ಧರ್ಮದ ಆಧಾರದ ಮೇಲೆ ಇರಬಾರದು, ಪ್ರತಿಯೊಬ್ಬ ನಂಬಿಕೆಯುಳ್ಳವರಿಗೂ ಸಂಸತ್ತು ಅಥವಾ ರಾಜ್ಯ ಅಸೆಂಬ್ಲಿಗಳು ಒಂದು ಕಾನೂನನ್ನು ಅಂಗೀಕರಿಸಬೇಕು" ಎಂದು ಶಾ ಟೈಮ್ಸ್ ಶೃಂಗಸಭೆಯಲ್ಲಿ ಹೇಳಿದರು.

ಬಿಜೆಪಿ ಹೊರತುಪಡಿಸಿ ಯಾವುದೇ ಪಕ್ಷ ಏಕರೂಪ ನಾಗರಿಕ ಸಂಹಿತೆಯ ಪರವಾಗಿಲ್ಲ, ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಚರ್ಚೆ ಅಗತ್ಯ, ಈ ಬಗ್ಗೆ ಮುಕ್ತ ಹಾಗೂ  ಆರೋಗ್ಯಕರ ಚರ್ಚೆಯ ಅಗತ್ಯವಿದೆ ಎಂದರು.

Similar News