ಬೆಂಗಳೂರು: ದ್ವಿಚಕ್ರ ವಾಹನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Update: 2022-11-25 03:36 GMT

ಬೆಂಗಳೂರು: ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಹಾಗು OLXನಲ್ಲಿ ಜಾಹೀರಾತು ನೀಡುವ ಮಾಲಕರುಗಳಿಗೆ ಟೆಸ್ಟ್ ಡ್ರೈವ್ ನೆಪದಲ್ಲಿ ಮೊಸ ಮಾಡಿ ಮತ್ತು ಆ್ಯಪ್‌ ಆಧಾರಿತ ಸ್ಕೂಟರ್ ಗಳನ್ನು ಬುಕ್ ಮಾಡಿ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ದೇವರಜೀವನಹಳ್ಳಿ ನಿವಾಸಿ ಯಾಸೀನ್‍ ಬೇಗ್ (22), ಗೋವಿಂದಪುರ ನಿವಾಸಿ ಇಮ್ರಾನ್‍ ಖಾನ್ (24) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಕೂಟರಗಳನ್ನು ಕಳವು ಮಾಡುತ್ತಿದ್ದ ಹಾಗೂ OLXನಲ್ಲಿ ಜಾಹೀರಾತು ನೀಡುವ ಮಾಲಕರುಗಳಿಗೆ ಟೆಸ್ಟ್ ಡ್ರೈವ್ ನೆಪದಲ್ಲಿ ಮೊಸ ಮಾಡಿ ಮತ್ತು ಆ್ಯಪ್‌ ಆಧಾರಿತ ಸ್ಕೂಟರ್ ಗಳನ್ನು ಬುಕ್ ಮಾಡಿ ವಂಚಿಸಿದ್ದ ಸುಮಾರು 15 ಲಕ್ಷ ರೂ. ಮೌಲ್ಯದ 19 ಸ್ಕೂಟರ್ ಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ 4 ಸ್ಕೂಟರ್ ಕಳವು ಪ್ರಕರಣಗಳು, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ 4 ಸ್ಕೂಟರ್ ಕಳವು ಪ್ರಕರಣಗಳು, ನಂದಿಗಿರಿಯಲ್ಲಿ 2 ಸ್ಕೂಟರ್ ಕಳವು, ಜೆ.ಬಿ.ನಗರ ಪೊಲೀಸ್ ಠಾಣೆಯ 1 ಸ್ಕೂಟರ್ ಕಳವು ಸೇರಿದಂತೆ ಒಟ್ಟು 19 ಸ್ಕೂಟರ್ ಕಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Similar News