ಎನ್‍ಡಿಟಿವಿ ಆಡಳಿತ ಮಂಡಳಿಗೆ ಪ್ರಣಯ್ ರಾಯ್, ಪತ್ನಿ ರಾಧಿಕಾ ರಾಯ್ ರಾಜೀನಾಮೆ

Update: 2022-11-30 05:26 GMT

ಹೊಸದಿಲ್ಲಿ: ಎನ್‍ಡಿಟಿವಿ ಸಂಸ್ಥಾಪಕರು ಮತ್ತು ಪ್ರವರ್ತಕರಾದ ಪ್ರಣಯ್ ರಾಯ್ ಹಾಗೂ ಅವರ ಪತ್ನಿ ರಾಧಿಕಾ ರಾಯ್ ನ್ಯೂಡೆಲ್ಲಿ ಟೆಲಿವಿಷನ್ (ಎನ್‍ಡಿಟಿವಿ) (founders and promoters of channel New Delhi Television - NDTV) ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ ಎಂದು newindianexpress.com ವರದಿ ಮಾಡಿದೆ.

ನವೆಂಬರ್ 29ರಿಂದ ಜಾರಿಗೆ ಬರುವಂತೆ ಆರ್‌ಆರ್‌ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್‍ (RRPR Holding, the promoter group)ನ ಆಡಳಿತ ಮಂಡಳಿಗೆ ಇಬ್ಬರೂ ರಾಜೀನಾಮೆ ನೀಡಿದ್ದಾರೆ ಎಂದು ಮಂಗಳವಾರ ನಿಯಂತ್ರಣ ಸಂಸ್ಥೆಗೆ ಸಲ್ಲಿಸಿದ ಹೇಳಿಕೆಯಲ್ಲಿ ಬಹಿರಂಗಪಡಿಸಲಾಗಿದೆ.

ಆರ್‌ಆರ್‌ಪಿಆರ್ ಹೋಲ್ಡಿಂಗ್‌ ಪ್ರವರ್ತಕ ಗುಂಪು ಹೊಂದಿದ್ದ ಶೇಕಡ 29.18ರಷ್ಟು ಷೇರನ್ನು ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹ ಖರೀದಿಸಿತ್ತು.

ಮಂಗಳವಾರ ನಡೆದ ಆರ್‌ಆರ್‌ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಅಡಳಿತ ಮಂಡಳಿ ಸಭೆಯಲ್ಲಿ ಸುದೀಪ್ತ ಭಟ್ಟಾಚಾರ್ಯ (Sudipta Bhattacharya), ಸಂಜಯ್ ಪುಗಾಲಿಯಾ (Sanjay Pugalia) ಮತ್ತು ಸೆಂಥಿಲ್ ಸಿನ್ನಿಯಾ ಚೆಂಗಲ್‍ವಾರಯನ್ (Senthil Sinniah Chengalvarayan) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ RRPRH ಆಡಳಿತ ಮಂಡಳಿಗೆ ನೇಮಕ ಮಾಡಲಾಗಿದೆ ಎಂದು ಮುಂಬೈ ಸ್ಟಾಕ್ ಎಕ್ಸ್‌ಚೇಂಜ್‍ಗೆ ಮಾಹಿತಿ ನೀಡಲಾಗಿದೆ ಎಂದು newindianexpress.com ವರದಿ ಮಾಡಿದೆ.

Similar News