ಮಹಿಳೆಯ ಅತ್ಯಾಚಾರ ಆರೋಪ: ಬಸ್ ಚಾಲಕನ ಬಂಧನ

Update: 2022-11-30 13:47 GMT

ಬೆಂಗಳೂರು, ನ.30:  ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವ ಆರೋಪದಡಿ ಖಾಸಗಿ ಬಸ್ ಚಾಲಕನೋರ್ವನನ್ನು ಇಲ್ಲಿನ ಚಂದ್ರಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. 

ಖಾಸಗಿ ಬಸ್ ಚಾಲಕ ಶಿವಕುಮಾರ್ ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗೆ ಸಂತ್ರಸ್ತ ಮಹಿಳೆ ಮೊದಲೇ ಪರಿಚಯ ಇರುವ ಕಾರಣ ಇಂದು ಸಂಜೆ ಆತ ಬರುತ್ತಿದ್ದ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಆದರೆ, ಇಲ್ಲಿನ ನಾಗರಭಾವಿ ಸರ್ವೀಸ್ ರಸ್ತೆಗೆ ಕರೆದೊಯ್ದು, ಆಕೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಆನಂತರ ಮಹಿಳೆ ನೀಡಿದ ದೂರಿನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Similar News