ಬೆಂಗಳೂರು: ಕರ್ತವ್ಯದ ವೇಳೆ ಕುಸಿದು ಬಿದ್ದು ಇನ್ಸ್​​ಪೆಕ್ಟರ್ ಮೃತ್ಯು

Update: 2022-12-02 18:17 GMT

ಬೆಂಗಳೂರು, ಡಿ.2: ಪೊಲೀಸ್​ ಇನ್ಸ್​ಪೆಕ್ಟರ್​ ಒಬ್ಬರು ವಿಧಾನಸೌಧದ ಭದ್ರತಾ ಕರ್ತವ್ಯದ ವೇಳೆ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ವರದಿಯಾಗಿದೆ.

2009ನೇ ಬ್ಯಾಚ್ ಪಿಎಸ್​ಐ ಆಗಿದ್ದ ಧನಂಜಯ್ ಮೃತ ಇನ್ಸ್​​ಪೆಕ್ಟರ್ ಎಂದು ತಿಳಿದು ಬಂದಿದೆ. 

ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಇನ್ಸ್​ಪೆಕ್ಟರ್ ಧನಂಜಯ್, ಕಳೆದ ಒಂದು ವರ್ಷದಿಂದ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿದ್ದರೆನ್ನಲಾಗಿದೆ. 

ಒಂದು ವಾರದ ಹಿಂದೆ  ಕರ್ತವ್ಯಕ್ಕೆ ವಾಪಸ್ ಆಗಿದ್ದ ಅವರು ಇಂದು ಕರ್ತವ್ಯದ ವೇಳೆ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಇನ್ಸ್​ಪೆಕ್ಟರ್ ಧನಂಜಯ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. 

ಮೃತರು ಪತ್ನಿ,ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.  

Similar News