ಡ್ರಗ್ಸ್ ಮಾರಾಟ ಆರೋಪ: ಸಿಸಿಬಿ ಪೊಲೀಸರಿಂದ ಕೇರಳ ಮೂಲದ ಯುವಕ-ಯುವತಿಯ ಬಂಧನ

Update: 2022-12-03 13:24 GMT

ಬೆಂಗಳೂರು, ಡಿ.3: ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಕೇರಳ ಮೂಲದ ಯುವಕ ಮತ್ತು ಆತನ ಸಂಗಾತಿಯನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು ಕೊಲಂಬಿಯಾದ ಕೊಕೇನ್ ಫೆಡ್ಲರ್ ಮೂಲವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಸಹಜೀವನ ನಡೆಸುತ್ತಿದ್ದ ಕಲಾವಿದರಾದ ಸಿಗಿಲ್ ವರ್ಗೀಸ್, ವಿಷ್ಣುಪ್ರಿಯಾಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿ ಕೊಲಂಬಿಯಾದ ಕುಖ್ಯಾತ ಕೊಕೇನ್ ಫೆಡ್ಲರ್ ನ ಭಾವಚಿತ್ರ ಪತ್ತೆಹಚ್ಚಿ 25 ಲಕ್ಷ ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ. ಎಸ್,ಟಿ ಶರಣಪ್ಪ ಅವರು ತಿಳಿಸಿದರು.

ಕೊಲಂಬಿಯಾದ ಕೊಕೇನ್ ಫೆಡ್ಲರ್ ಪಬ್ಲೊ ಎಸ್ಕೊಬರ್ ರೋಲ್‍ಮಾಡೆಲ್ ಮಾಡಿಕೊಂಡು ಆತನಂತೆ ತಾವೂ ಸಹ ಡ್ರಗ್ಸ್ ಲೋಕದ ದೊರೆಯಾಗಬೇಕೆಂಬ ಗುರಿಯನ್ನು ಬಂಧಿತ ಆರೋಪಿಗಳು ಹೊಂದಿದ್ದರೆನ್ನಲಾಗಿದೆ. 

ಬಂಧಿತ ಆರೋಪಿಗಳು ಚಂದಾಪುರದ ಫ್ಲಾಟ್‍ನಲ್ಲಿ ಶೇಖರಿಸಿದ್ದ 25 ಲಕ್ಷ ರೂ. ಮೌಲ್ಯದ 100 ಗ್ರಾಂ ಎಂಡಿಎಂಎ, 150 ಗ್ರಾಂ ಎಸ್‍ಎಲ್‍ಡಿ ಮಾತ್ರೆಗಳು, ಡ್ರಗ್ ವ್ಯವಹಾರದ ಡೈರಿ, ಕುಖ್ಯಾತ ಡ್ರಗ್‍ಫೆಡ್ಲರ್ ನ ಭಾವಚಿತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಇದನ್ನೂ ಓದಿ: ಮುಳಬಾಗಿಲು | ದಲಿತ ಯುವಕನಿಗೆ ದೌರ್ಜನ್ಯ, ಆತ್ಮಹತ್ಯೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ 

Similar News