ಯುವ ಮಂಡಳಿ ಪ್ರಶಸ್ತಿಗೆ ಅರ್ಜಿ ಆಹ್ವಾನ

Update: 2022-12-03 14:45 GMT

ಮಂಗಳೂರು, ಡಿ.3:  ಕೇಂದ್ರ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಯುವಕ ಹಾಗೂ ಯುವತಿ ಮಂಡಳಿಗಳಿಗೆ 2021-22ನೇ ಸಾಲಿಗೆ ಜಿಲ್ಲಾ ಯುವ ಮಂಡಳಿ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಿದೆ.

ಯುವಕ ಹಾಗೂ ಯುವತಿ ಮಂಡಳಗಳು ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಾವಣಿಯಾಗಿ ನೆಹರು ಯುವ ಕೇಂದ್ರದಲ್ಲಿ ಸಂಯೋಜನ ಹೊಂದಿರಬೇಕು.

ಕಳೆದ ಸಾಲಿನಲ್ಲಿ 2021-22ರಲ್ಲಿ ಗ್ರಾಮ/ಪಟ್ಟಣ/ತಾಲೂಕು ಅಭಿವೃದ್ಧಿಗಾಗಿ ಜನಪರ ಕಾರ್ಯಕ್ರಮಗಳನ್ನು ನಡೆಸಿರಬೇಕು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಯುವ ಮಂಡಲಕ್ಕೆ 25,000 ರೂ., ರಾಜ್ಯ ಮಟ್ಟದ ಪ್ರಥಮ 75,000 ರೂ., ದ್ವಿತೀಯ 50,000 ರೂ. ಹಾಗೂ ತೃತೀಯ 25,000 ರೂ.ಗಳು, ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ 3,00,000 ರೂ.ಗಳು, ದ್ವಿತೀಯ 1,00,000 ಹಾಗೂ ತೃತೀಯ 50,000 ರೂ. ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಅರ್ಜಿಯು ರಾಜ್ಯ ಮಟ್ಟದ ಮತ್ತು ರಾಷ್ಟ್ರೀಯ ಮಟ್ಟದ ಆಯ್ಕೆಗೆ ಅರ್ಹತೆ ಪಡೆಯುತ್ತದೆ.

ಆಸಕ್ತರು ನೆಹರು ಯುವಕೇಂದ್ರ, ಕಂದಾಯ ಭವನ, ನೆಲಮಹಡಿ, ಡಿ.ಸಿ. ಕಚೇರಿ ಆವರಣ, ಮಂಗಳೂರು - 575001 ಈ ಕಚೇರಿಯಿಂದ ಸಂಪೂರ್ಣ ಮಾಹಿತಿ ಹಾಗೂ ಅರ್ಜಿ ಪಡೆಯಬಹುದು. ಅರ್ಜಿಗಳನ್ನು 2022ರ ಡಿ.17ರೊಳಗೆ ಸಲ್ಲಿಸುವಂತೆ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಘುವೀರ್ ಸೂಟರ್‌ಪೇಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News