ಹಿಮಾಚಲ ಪ್ರದೇಶದಲ್ಲಿ 3.4 ತೀವ್ರತೆಯ ಭೂಕಂಪ

Update: 2022-12-03 15:47 GMT

ಶಿಮ್ಲಾ,ಡಿ.3: ಹಿಮಾಚಲ ಪ್ರದೇಶದ ಚಂಬಾ (Chamba)ಮತ್ತು ಸುತ್ತಲಿನ ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿ 3.4 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದಿಂದಾಗಿ ಯಾವುದೇ ಜೀವಹಾನಿ ಸಂಭವಿಸಿಲ್ಲ.

ಭೂಕಂಪದ ಕೇಂದ್ರಬಿಂದು ಚಂಬಾ ಜಿಲ್ಲೆಯ ಟಿಸ್ಸಾ ಪ್ರದೇಶದ ಸಮೀಪದ ಧಾರ್ ಮಕ್ಕನ್‌ನಲ್ಲಿತ್ತು ಎಂದು ವಿಪತ್ತು ನಿರ್ವಹಣೆ ವಿಶೇಷ ಕಾರ್ಯದರ್ಶಿ ಸುದೇಶ ಮೋಕ್ತಾ ತಿಳಿಸಿದರು.

ಕೆಲವು ಸೆಕೆಂಡ್‌ಗಳ ಕಾಲ ಭೂಮಿ ನಡುಗಿದ್ದ,ಭೀತಿಗೊಂಡಿದ್ದ ಜನರು ತಮ್ಮ ಮನೆಗಳಿಂದ ಹೊರಕ್ಕೆ ಬಂದಿದ್ದರು. ಈವರೆಗೆ ಯಾವುದೇ ಜೀವಹಾನಿ ಅಥವಾ ಆಸ್ತಿಹಾನಿ ವರದಿಯಾಗಿಲ್ಲ ಎಂದರು.

Similar News