‘ವಾರ್ತಾಭಾರತಿ’ ವರದಿಗಾರ ಸಮೀರ್ ದಳಸನೂರು ಸೇರಿ 24 ಮಂದಿ ಪತ್ರಕರ್ತರು ಮೀಡಿಯಾ ಪುರಸ್ಕಾರಕ್ಕೆ ಆಯ್ಕೆ

Update: 2022-12-03 16:19 GMT

ಬೆಂಗಳೂರು, ಡಿ. 3: ‘ವಾರ್ತಾಭಾರತಿ’ ಪತ್ರಿಕೆಯ ವರದಿಗಾರ ಮುಹಮ್ಮದ್ ಸಮೀರ್ ದಳಸನೂರು,  ಪತ್ರಕರ್ತರಾದ ಎನ್.ಬಿ.ಹೊಂಬಾಳ್, ಪ್ರಸಾದ್ ನಾಯಕ್, ಸೋಮಶೇಖರ ಕವಚೂರು, ಶಿವಕುಮಾರ್ ಬೆಳ್ಳಿತಟ್ಟೆ, ಶಾಂತಲ ಧರ್ಮರಾಜ್, ನಂಜುಂಡಪ್ಪ ವಿ. ಹಾಗೂ ಅಬ್ದುಲ್ ಹಮೀದ್ ಸೇರಿದಂತೆ 24 ಮಂದಿ ಪತ್ರಕರ್ತರು ‘ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದಾರೆ.

ರಾಜ್ಯದಲ್ಲಿ ಡಿಜಿಟಲ್ ಮೀಡಿಯಾ ವಲಯದಲ್ಲಿ ‘ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್’ ಹೊಸ ಹೆಜ್ಜೆ ಇಟ್ಟಿದ್ದು, ಸಂಸ್ಥೆಯ ಲೋಗೋ ಬಿಡುಗಡೆ ಕಾರ್ಯಕ್ರಮ ಡಿ.5ರ ಬೆಳಗ್ಗೆ ಇಲ್ಲಿನ ಅರಮನೆ ರಸ್ತೆಯಲ್ಲಿನ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‍ನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ರಾಜ್ಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಪರಿಷತ್ತಿನ ಸಭಾಪತಿ ರಘುನಾಥ ರಾವ್ ಮಲ್ಕಾಪುರೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಹೆಲ್ಮೆಟ್ ವಿತರಣೆ ಮಾಡಲಿದ್ದು, ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ಅಸೋಸಿಯೇಷನ್‍ನ ಲಾಂಛನ ಅನಾವರಣಗೊಳಿಸಲಿದ್ದಾರೆ. ತೋಟಗಾರಿಕಾ ಸಚಿವ ಮುನಿರತ್ನ ಸಂಸ್ಥೆಯ ಡೈರಿ ಬಿಡುಗಡೆ ಮಾಡಲಿದ್ದು,. ಅಬಕಾರಿ ಸಚಿವ ಗೋಪಾಲಯ್ಯ ಟೀ ಶರ್ಟ್ ಹಾಗೂ ಜರ್ಕೀನ್ ವಿತರಣೆ ಮಾಡಲಿದ್ದಾರೆ.

ಪುರಸ್ಕಾರಕ್ಕೆ ಮಿನಿ ಜೋಸೆಫ್, ಬನ್ಸಿ ಕಾಳಪ್ಪ, ಸಾಮಗ ಶೇಷಾದ್ರಿ, ತುಳಸೀ ಕುಮಾರ್, ಮಾರುತಿ ಪಾವಗಡ, ರಾಚಪ್ಪ ಸುತ್ತೂರು, ಕೆ.ಮುಕುಂದ, ಶಿವು ಜೊನ್ನಳ್ಳಿ, ಚಂದ್ರಶೇಖರ್ ಜಿ., ವೈ.ಮಹೇಶ್ವರ ರೆಡ್ಡಿ, ಡಿ.ಎಲ್. ಹರೀಶ್, ತಾರಾನಾಥ್, ವೀರಭದ್ರಪ್ಪ, ವಾದಿರಾಜು ಬಿ. ಹಾಗೂ ಜೇಮ್ಸ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Similar News