ವಾಹನಗಳ ಫ್ಯಾನ್ಸಿ ನಂಬರ್ ಹರಾಜಿನಿಂದ ಬಂದ ಆದಾಯ ಎಷ್ಟು ಗೊತ್ತೇ ?

Update: 2022-12-04 02:56 GMT

ಬೆಂಗಳೂರು: ವಾಹನಗಳಿಗೆ ಕೆಎ-01/ಎಂಝೆಡ್ (KA-01/MZ) ಸರಣಿಯ ಫ್ಯಾನ್ಸಿ ರಿಜಿಸ್ಟ್ರೇಷನ್ ನಂಬರ್ ಹರಾಜು ಮಾಡಿರುವ ಕರ್ನಾಟಕದ ಸಾರಿಗೆ ಇಲಾಖೆ 26 ಯಶಸ್ವಿ ಬಿಡ್ಡರ್‌ಗಳಿಂದ (bidders) 30 ಲಕ್ಷ ರೂಪಾಯಿ ಸಂಗ್ರಹಿಸಿದೆ ಎಂದು timesofindia.com ವರದಿ ಮಾಡಿದೆ.

ಅತಿಹೆಚ್ಚು ಬೆಲೆಗೆ ಹರಾಜಾದ ಫ್ಯಾನ್ಸಿ ನಂಬರ್ ಕೆಎ-01/ಎಂಝೆಡ್-9999. ಈ ರಿಜಿಸ್ಟ್ರೇಷನ್ ನಂಬರ್ 3.3 ಲಕ್ಷ ರೂಪಾಯಿಗೆ ಹರಾಜಾಗಿದೆ. ಎಂಝೆಡ್-0009 ಸಂಖ್ಯೆ 2 ಲಕ್ಷಕ್ಕೆ, ಎಂಝೆಡ್-999 ಸಂಖ್ಯೆ 1.8 ಲಕ್ಷಕ್ಕೆ, ಎಂಝೆಡ್-001 1.3 ಲಕ್ಷ ರೂಪಾಯಿಗೆ, ಎಂಝೆಡ್-0099 80 ಸಾವಿರಕ್ಕೆ, ಎಂಝೆಡ್-0005 52 ಸಾವಿರ ರೂಪಾಯಿಗೆ ಬಿಕರಿಯಾಗಿದೆ. ಫ್ಯಾನ್ಸಿ ನಂಬರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ವಿಶೇಷವಾಗಿ ರಾಜಕಾರಣಿಗಳು, ಚಿತ್ರ ತಾರೆಯರು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳಿಂದ ಬೇಡಿಕೆ ಬರುತ್ತಿದೆ.

ರಿಜಿಸ್ಟ್ರೇಷನ್ ನಂಬರ್‌ಗಳ ಇ-ಹರಾಜು ಸೌಲಭ್ಯವನ್ನು ಕೂಡಾ ಆರಂಭಿಸುವ ಬಗ್ಗೆ ಇಲಾಖೆ ಚಿಂತನೆ ನಡೆಸಿದ್ದು, ಈ ಪ್ರಸ್ತಾವನೆ ಇನ್ನೂ ಕಾಗದದಲ್ಲೇ ಉಳಿದಿದೆ. ಈಗಾಗಲೇ ಆಂಧ್ರಪ್ರದೇಶ, ಹರ್ಯಾಣ ಮತ್ತು ಪಂಜಾಬ್ ಈ ವ್ಯವಸ್ಥೆಗೆ ಚಾಲನೆ ನೀಡಿವೆ.

ಕರ್ನಾಟಕದ ಸಾರಿಗೆ ಇಲಾಖೆ ಚಾಲ್ತಿಯಲ್ಲಿರುವ ಎಲ್‍ಎಂವಿಗಳಿಗೆ ಮತ್ತು ಹೊಸ ಸರಣಿಗಳಿಗೆ ಫ್ಯಾನ್ಸಿ ರಿಜಿಸ್ಟ್ರೇಷನ್ ನಂಬರ್‌ಗಳನ್ನು 2015ರಿಂದ ಹರಾಜು ಮಾಡುತ್ತಿದೆ. ಹಾಲಿ ಇರುವ ಸರಣಿಯ ಸಂಖ್ಯೆಗಳಿಗೆ ರೂ. 20 ಸಾವಿರ ಹಾಗೂ ಹೊಸ ಸರಣಿಗೆ 75 ಸಾವಿರ ರೂಪಾಯಿ ಮರುಪಾವತಿ ಇಲ್ಲದ ಠೇವಣಿ ಪಾವತಿಸಬೇಕಾಗುತ್ತದೆ ಎಂದು timesofindia.com ವರದಿ ಮಾಡಿದೆ.

Similar News