ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಮಹಿಳಾ ರ‍್ಯಾಲಿ

Update: 2022-12-04 18:09 GMT

ಹೊಸದಿಲ್ಲಿ, ಡಿ. 3: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದ ಮಹಿಳಾ ರ್ಯಾಲಿ 2023ರಲ್ಲಿ ಎರಡು ತಿಂಗಳ ಕಾಲ ನಡೆಯಲಿದೆ ಎಂದು ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ರವಿವಾರ ಘೋಷಿಸಿದ್ದಾರೆ. ಮಹಿಳಾ ರ್ಯಾಲಿಯನ್ನು ದೇಶದ ಎಲ್ಲ ರಾಜ್ಯಗಳ ರಾಜಧಾನಿಯಲ್ಲಿ 2023 ಜನವರಿ 26ರಿಂದ 2023 ಮಾರ್ಚ್ 26ರ ವರೆಗೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ರಾಹುಲ್ ಗಾಂಧಿ ಅವರ ‘ಭಾರತ್ ಜೋಡೊ ಯಾತ್ರೆ’ ಕೊನೆಗೊಳ್ಳುವ ದಿನವೇ ಪ್ರಿಯಾಂಕಾ ಗಾಂಧಿ ಅವರ ಮಹಿಳಾ ರ್ಯಾಲಿ ಆರಂಭವಾಗಲಿದೆ.

Similar News