'ವಾರ್ತಾಭಾರತಿ' ವರದಿಗಾರ ಮುಹಮ್ಮದ್ ಸಮೀರ್ ದಳಸನೂರು ಸೇರಿ ಹಿರಿಯ ಪತ್ರಕರ್ತರಿಗೆ ಮೀಡಿಯಾ ಪುರಸ್ಕಾರ ಪ್ರದಾನ

Update: 2022-12-05 17:10 GMT

ಬೆಂಗಳೂರು, ಡಿ. 5: ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್‍ನ ಪ್ರಪ್ರಥಮ ‘ಮೀಡಿಯಾ ಪುರಸ್ಕಾರ'ವನ್ನು ವಾರ್ತಾಭಾರತಿ ಪತ್ರಿಕೆಯ ವರದಿಗಾರ ಮುಹಮ್ಮದ್ ಸಮೀರ್ ದಳಸನೂರು ಸೇರಿ ಹಿರಿಯ ಪತ್ರಕರ್ತರಿಗೆ ಪ್ರದಾನ ಮಾಡಲಾಯಿತು.

ಸೋಮವಾರ ಇಲ್ಲಿನ ಅರಮನೆ ರಸ್ತೆಯ ಕೊಂಡಜ್ಜಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೀಡಿಯಾ ಪುರಸ್ಕಾರ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ವಿ.ಮನೋಹರ್ ಸೇರಿದಂತೆ ಹಲವು ಗಣ್ಯರು ಪತ್ರಕರ್ತರಿಗೆ  ‘ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಪುರಸ್ಕಾರ’ ಪ್ರದಾನ ಮಾಡಿ ಗೌರವಿಸಿದರು.

ಸಮಾರಂಭದ ಪ್ರಸ್ತಾವಿಕ ಮಾತುಗಳನ್ನಾಡಿದ ಹಿರಿಯ ಪತ್ರಕರ್ತ ಪ್ರಸಾದ್ ನಾಯಕ್, ‘ಆಧುನಿಕ ಮಾಧ್ಯಮ ಯುಗದಲ್ಲಿ ಡಿಜಿಟಲ್ ಮೀಡಿಯಾ ಸಂಘಟನೆ ಅಗತ್ಯವಿದ್ದು, ಡಿಜಿಟಲ್ ವಲಯದಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮಕ್ಕೆ ಸೂಕ್ತ ಮಾನ್ಯತೆ ದೊರಕಿಸಿಕೊಡಲು ಸಂಘಟನೆ ಪ್ರಯತ್ನಿಸಬೇಕು’ ಎಂದರು.

ಪುರಸ್ಕಾರ: ಪತ್ರಕರ್ತರಾದ ಪ್ರಸಾದ್ ನಾಯಕ್, ಶಿವಕುಮಾರ್ ಬೆಳ್ಳಿತಟ್ಟೆ, ನಂಜುಂಡಪ್ಪ ವಿ., ಎನ್.ಬಿ. ಹೊಂಬಾಳ್, ತುಳಸಿ ಕುಮಾರ್, ಮಾರುತಿ ಪಾವಗಡ, ಎಸ್.ಎಸ್.ರೆಡ್ಡಿ, ರಾಚಪ್ಪ ಸುತ್ತೂರು, ಕೆ. ಮುಕುಂದ, ಶಿವು ಜೊನ್ನಳ್ಳಿ, ಚಂದ್ರಶೇಖರ್ ಜಿ., ವೈ.ಮಹೇಶ್ವರ ರೆಡ್ಡಿ, ಅಬ್ದುಲ್ ಹಮೀದ್ ಉಪ್ಪಿನಂಗಡಿ, ತಾರಾನಾಥ್, ವೀರಭದ್ರಪ್ಪ, ವಾದಿರಾಜು ಬಿ., ಮುಹಮ್ಮದ್ ಸಮೀರ್ ದಳಸನೂರು ಸೇರಿದಂತೆ ಪ್ರಮುಖರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಸೋಸಿಯೇಷನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ, ಡಿ.ಎಕ್ಸ್, ಮ್ಯಾಕ್ಸ್ ಮುಖ್ಯಸ್ಥ ಎಸ್.ಪಿ. ದಯಾನಂದ್, ಚಿತ್ರನಟ ಡಿಂಗ್ರಿ ನಾಗರಾಜ್ ಸೇರಿದಂತೆ ಪ್ರಮುಖರಿದ್ದರು.

Similar News