ಹಿಮಾಚಲ ಪ್ರದೇಶ: ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿ

Update: 2022-12-08 08:59 GMT

ಶಿಮ್ಲಾ: ಹಿಮಾಚಲಪ್ರದೇಶದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ಕಂಡುಬಂದಿದೆ. 

ಸದ್ಯದ ಟ್ರೆಂಡ್ ಪ್ರಕಾರ ಕಾಂಗ್ರೆಸ್ 39 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಬಿಜೆಪಿ 26ರಲ್ಲಿ ಮುನ್ನಡೆಯಲ್ಲಿದೆ. ಮೂವರು ಪಕ್ಷೇತರರು ಮುಂದಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಗೆದ್ದರೆ, ಹಿಮಾಚಲ ರಾಜ್ಯವು ಅಧಿಕಾರದಲ್ಲಿರುವ ಸರಕಾರದ ವಿರುದ್ಧ ಮತ ಹಾಕುವ ಸಂಪ್ರದಾಯಕ್ಕೆ ಅಂಟಿಕೊಂಡಂತಾಗುತ್ತದೆ. ಸುಮಾರು ನಾಲ್ಕು ದಶಕಗಳಿಂದ ಈ ರಾಜ್ಯದಲ್ಲಿ ಬಿಜೆಪಿ ಹಾಗೂ  ಕಾಂಗ್ರೆಸ್ ನಡುವೆ ಸರಕಾರ ಬದಲಾಗುತ್ತಾ ಬಂದಿದೆ. ಹಿಮಾಚಲ ಜನತೆ ಎರಡೂ ಪಕ್ಷಗಳಿಗೆ ಸತತ ಎರಡನೇ ಅವಧಿಯನ್ನು ನಿರಾಕರಿಸುತ್ತಾ ಬಂದಿದ್ದಾರೆ.

ಅತಂತ್ರವಾದರೆ ಕಾಂಗ್ರೆಸ್ ಶಾಸಕರು ಛತ್ತೀಸ್ ಗಢಕ್ಕೆ: ಫಲಿತಾಂಶವು ಅತಂತ್ರವಾದರೆ, ಬಿಜೆಪಿಯಿಂದ ಕುದುರೆ ವ್ಯಾಪಾರ  ತಡೆಯಲು ಪಕ್ಷವು ತನ್ನ ಶಾಸಕರನ್ನು ತನ್ನ ಆಡಳಿತವಿರುವ ಛತ್ತೀಸ್‌ಗಢಕ್ಕೆ ಬದಲಾಯಿಸಬಹುದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಪಕ್ಷೇತರರ ಸಂಪರ್ಕದಲ್ಲಿ ಬಿಜೆಪಿ: ಪಕ್ಷೇತರರಾಗಿ  ಸ್ಪರ್ಧಿಸಿರುವ ಮೂವರು ಮುನ್ನಡೆಯಲ್ಲಿದ್ದು,  ಬಿಜೆಪಿಯು ಬಂಡಾಯ ನಾಯಕರ  ಸಂಪರ್ಕ ಸಾಧಿಸಲು  ಆರಂಭಿಸಿದೆ ಎಂದು ವರದಿಯಾಗಿದೆ. ಈ ಪಕ್ಷೇತರರಲ್ಲಿ ಮೂವರು ಬಿಜೆಪಿ ಬಂಡಾಯಗಾರರು.

 68 ಸದಸ್ಯರ ಸದನದಲ್ಲಿ ಯಾವುದೇ ಪಕ್ಷವು 35 ರ ಬಹುಮತದ ಅಂಕವನ್ನು ಮುಟ್ಟದಿದ್ದರೆ ಪಕ್ಷೇತರರ ಪಾತ್ರ ಮುಖ್ಯವಾಗುತ್ತದೆ.

Similar News