ಮಾಸ್ಟರ್‌ ಚೆಫ್‌ ಸ್ಪರ್ಧೆಯಲ್ಲಿ ವಿಜೇತರಾದ ಭಾರತೀಯ ಮೂಲದ ನಿಕಿತಾ

Update: 2022-12-12 09:45 GMT

ಹೊಸದಿಲ್ಲಿ: ಭಾರತೀಯ ಮೂಲದ 25 ವರ್ಷದ ನಿಕಿತಾ ಪತಾಕ್ಜಿ ಅವರು ಮಾಸ್ಟರ್‌ ಚೆಫ್:‌ ದಿ ಪ್ರೊಫೆಷನಲ್ಸ್‌ 2022 ರಲ್ಲಿ ವಿಜೇತರಾಗಿದ್ದಾರೆ. ಡರ್ಬಿ ನಗರದಲ್ಲಿ ಹುಟ್ಟಿ ಬೆಳೆದ ನಿಕಿತಾ ಅವರು ಅಂತಿಮ ಹಣಾಹಣಿಯಲ್ಲಿ ತಮ್ಮ ವಿನೂತನ ಖಾದ್ಯಗಳಿಂದ ತೀರ್ಪುಗಾರರಿಗೆ ಖುಷಿ ನೀಡಿದ್ದರಲ್ಲದೆ ಚಾರ್ಲಿ ಜೆಫ್ರೀಸ್‌ ಮತ್ತು ಸಾಗರ್‌ ಮಸ್ಸೆ ಅವರನ್ನು ಸೋಲಿಸಿದ್ದಾರೆ.

ಸುಮಾರು 31 ಮಂದಿ ಇತರ ವೃತ್ತಿಪರ ಪಾಕಪ್ರವೀಣರು ಭಾಗವಹಿಸಿದ್ದ ಈ ಸ್ಪರ್ಧೆಯ ಆರು ವಾರಗಳುದ್ದಕ್ಕೂ ಹಲವಾರು ಸವಾಲುಗಳನ್ನು ನಿಕಿತಾ ಎದುರಿಸಿ ಮುನ್ನಡೆದಿದ್ದಾರೆ.

ಖ್ಯಾತ ಪಾಕತಜ್ಞರಾದ ಮಾರ್ಕಸ್‌ ವೇರಿಂಗ್‌, ಅನ್ನಾ ಹಾವ್‌ ಮತ್ತು ಗ್ರೆಗ್ಗ್‌ ಅವರು ತೀರ್ಪುಗಾರರಾಗಿದ್ದರು. ನಿಕಿತಾಗೆ ಪ್ರಶಸ್ತಿ ತಂದುಕೊಟ್ಟ ಮೆನುವಿನಲ್ಲಿ ಸಿಟ್ರಸ್‌ ಡ್ರೆಸ್ಸಿಂಗ್‌ ಹೊಂದಿದ ಸೀ‌ ಬಾಸ್ಸ್, ಸ್ಮೋಕ್ಡ್‌ ಔಬರ್ಗೀನ್‌ ಪುರೀ,ಸ್ಪೈಸೀ ರೆಡ್‌ ಪೆಪ್ಪರ್‌ ಪುರೀ ವಿದ್‌ ಪೊಮೆಗ್ರನೇಟ್‌, ಪ್ರಿಸರ್ವ್ಡ್‌ ಲೆಮನ್‌, ಪಾರ್ಸ್ಲೆ ಆಯಿಲ್ ಮತ್ತು ಔಬರ್ಗೀನ್‌ ಕ್ರಿಸ್ಪ್‌ಗಳಿದ್ದವು.

ಪ್ರಸ್ತುತ ಲಂಡನ್‌ನ ಕ್ಲಫಮ್‌ ನಗರದಲ್ಲಿ ಆಕೆ ತಮ್ಮ ತಂದೆ ತಾಯಿ, ಸಹೋದರಿಯೊಂದಿಗೆ ವಾಸವಾಗಿದ್ದಾರೆ.

Similar News