ಅಭಿವೃದ್ಧಿಗೆ ವಿರೋಧವಲ್ಲ, ಬಡವರ ಪರ ಇರುವುದು

ಎಸ್. ಪರಶುರಾಮನ್ ತೋರಿಸಿದ್ದ ಘನತೆಯ ಹಾದಿ

Update: 2022-12-15 04:55 GMT

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕನಿಷ್ಠ ರೈತರ ಕುಟುಂಬದಲ್ಲಿ ಜನಿಸಿದ ಪರಶುರಾಮನ್ ಅವರು 1981ರಲ್ಲಿ ತಮ್ಮ ಶೈಕ್ಷಣಿಕ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಜನಸಂಖ್ಯಾಶಾಸ್ತ್ರಜ್ಞ ಮತ್ತು ಮಾನವಶಾಸ್ತ್ರಜ್ಞರಾಗಿ ತರಬೇತಿ ಪಡೆದರು. ಆಗಸ್ಟ್ 2004ರಲ್ಲಿ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ನಿರ್ದೇಶಕರಾಗಿ ಬಂದ ನಂತರ 14 ವರ್ಷಗಳಲ್ಲಿ ಅವರು ಸಂಸ್ಥೆಗಾಗಿ ಮಾಡಿದ್ದು ಅಪಾರ. ಅವರನ್ನು ಅಭಿವೃದ್ಧಿಯ ವಿರೋಧಿ ಎನ್ನಲಾಯಿತು. ಆದರೆ ಅವರು ಬಡವರ ಪರ, ಜನರ ಪರ ಇರಲು ಬಯಸಿದರು.

2017ರಲ್ಲಿ ಒಂದು ರವಿವಾರ ಸಂಜೆ, ನಾನು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ನಿರ್ದೇಶಕ ಎಸ್. ಪರಶುರಾಮನ್ ಅವರನ್ನು ಮುಂಬೈನ ಗೋವಂಡಿ ಸನಿಹದ ಕ್ಯಾಂಪಸ್‌ನಲ್ಲಿರುವ ಅವರ ಕಚೇರಿಯಲ್ಲಿ ಭೇಟಿಯಾದೆ, 2010ರಲ್ಲಿ ನಾನು ಅವರನ್ನು ಮೊದಲು ಭೇಟಿಯಾದಾಗ ಕುಳಿತಿದ್ದ ಸ್ಥಳದಲ್ಲಿಯೇ ಕುಳಿತುಕೊಂಡೆ. ಇಷ್ಟೊಂದು ತನ್ಮಯತೆ ಮತ್ತು ಬದ್ಧತೆಯಿಂದ ಕೆಲಸ ಮಾಡುವುದು ನಿಮಗೆ ಹೇಗೆ ಸಾಧ್ಯವಾಗುತ್ತದೆ ಎಂದು ಕೇಳಿದೆ. ಅವರು ಹೇಳಿದರು: ನೀವು ಇಷ್ಟಪಡುವುದು ಯಾವುದೆಂಬುದನ್ನು ಕಂಡುಕೊಳ್ಳಿ ಮತ್ತು ಅದು ನಿಮ್ಮನ್ನು ಕೊಲ್ಲಲು ಬಿಡಿ.

ಕಳೆದ ಸೆಪ್ಟಂಬರ್ 2ರಂದು, 70ನೇ ವಯಸ್ಸಿನಲ್ಲಿ ಪರಶುರಾಮನ್ ಅವರು ನಿಧನರಾದ ಬಗ್ಗೆ ಕೇಳಿದಾಗ ಅವರ ಆ ಮಾತು ಮತ್ತೆ ನೆನಪಾಯಿತು. 60ರ ಹರೆಯದಲ್ಲೂ, ಅವರು 2004ರಿಂದ 14 ವರ್ಷಗಳ ಕಾಲ ಅವರ ನೇತೃತ್ವದ ಸಂಸ್ಥೆಗಾಗಿ ದಿನಕ್ಕೆ 15 ಗಂಟೆಗಳ ಕಾಲ ಕೆಲಸ ಮಾಡಿದ್ದರು. ಎಲ್ಲರಿಗೂ ನ್ಯಾಯ, ಘನತೆ ಮತ್ತು ಹಕ್ಕುಗಳ ಲಭ್ಯತೆ ವಿಚಾರದಲ್ಲಿ ತನ್ನ ವಿದ್ಯಾರ್ಥಿಗಳು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರಿಗೆ ಅಪಾರ ಕುತೂಹಲವಿತ್ತು.

ನಾನು 2010ರಿಂದ ಸುಮಾರು ಎಂಟು ವರ್ಷಗಳ ಕಾಲ ಪರಶುರಾಮನ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇನೆ, ಆರಂಭದಲ್ಲಿ ಅವರ ಡಾಕ್ಟರೇಟ್ ವಿದ್ಯಾರ್ಥಿಯಾಗಿ ಮತ್ತು ನಂತರ ಸಹೋದ್ಯೋಗಿಯಾಗಿ. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನಲ್ಲಿ ಅವರ ಕೊನೆಯ ದಿನಗಳಲ್ಲಿ, ಬಹುಶಃ ಅತಿ ಕಡಿಮೆ ಜನರು ಹೊಂದಿದ್ದಂಥ ಬಾಂಧವ್ಯವನ್ನು ನಾನು ಅವರೊಂದಿಗೆ ಹೊಂದಿದ್ದೆ ಮತ್ತು ಅವರು ಕೆಲಸ ಮಾಡುವ ರೀತಿಗೆ ವಿಸ್ಮಯಗೊಂಡಿದ್ದೆ.

"ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಎಂದರೆ ಅವರಿಗೆ ಜಗತ್ತೇ ಆಗಿತ್ತು. ಅದನ್ನು ಅವರು ತನ್ನ ಜೀವಿತಾವಧಿಯಲ್ಲಿ ಎಂದಿಗೂ ಬಿಡಲು ಬಯಸಲಿಲ್ಲ. 2018ರ ಆರಂಭದಲ್ಲಿ, ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳು ಪರಶುರಾಮನ್ ಅವರಿಗೆ ವಿದಾಯ ಹೇಳುತ್ತಿದ್ದಾಗ, ಅವರು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಆದರ್ಶದ ಭಾಗವನ್ನೇ ಶಾಶ್ವತವಾಗಿ ತನ್ನೊಂದಿಗೆ ತೆಗೆದುಕೊಂಡು ಹೋಗುತ್ತಾರೆ ಎಂದು ಅವರಿಗೆ ತಿಳಿದಿರಲಿಲ್ಲ".

ಅವರು ಸಂಸ್ಥೆಯ ಬೋಧನೆ, ಸಂಶೋಧನೆ, ಮೂಲಸೌಕರ್ಯ ಮತ್ತು ಫೀಲ್ಡ್ ಆ್ಯಕ್ಷನ್ ಗುರಿಗಳನ್ನು ಭಾರತದ ಹೊಸ ವಾಸ್ತವಕ್ಕೆ ಉತ್ತರವಾಗಿ ಬಳಸುವಂತೆ ವಿಸ್ತರಿಸಿದರು, ಎಲ್ಲಾ ಸಮಯದಲ್ಲೂ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಮೂಲ ತತ್ವದಲ್ಲಿ ಅವರಿಗೆ ದೃಢತೆಯಿತ್ತು. ಮೇ 2005ರಲ್ಲಿ ನಿರ್ದೇಶಕರಾಗಿ ತಮ್ಮ ಮೊದಲ ಘಟಿಕೋತ್ಸವದ ಭಾಷಣದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದ್ದು: ‘‘ನೀವು ಎಲ್ಲಿ ಕೆಲಸ ಮಾಡುತ್ತೀರಿ ಎಂಬುದಲ್ಲ, ಆದರೆ ನೀವು ಯಾರ ಆಸಕ್ತಿಗಳಿಗಾಗಿ ಕೆಲಸ ಮಾಡುತ್ತೀರಿ ಎಂಬುದರಲ್ಲಿ ವ್ಯತ್ಯಾಸವಿರುತ್ತದೆ ಎಂಬುದನ್ನು ನೆನಪಿಡಿ.’’

"ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಎಂದರೆ ಅವರಿಗೆ ಜಗತ್ತೇ ಆಗಿತ್ತು. ಅದನ್ನು ಅವರು ತನ್ನ ಜೀವಿತಾವಧಿಯಲ್ಲಿ ಎಂದಿಗೂ ಬಿಡಲು ಬಯಸಲಿಲ್ಲ. 2018ರ ಆರಂಭದಲ್ಲಿ, ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳು ಪರಶುರಾಮನ್ ಅವರಿಗೆ ವಿದಾಯ ಹೇಳುತ್ತಿದ್ದಾಗ, ಅವರು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಆದರ್ಶದ ಭಾಗವನ್ನೇ ಶಾಶ್ವತವಾಗಿ ತನ್ನೊಂದಿಗೆ ತೆಗೆದುಕೊಂಡು ಹೋಗುತ್ತಾರೆ ಎಂದು ಅವರಿಗೆ ತಿಳಿದಿರಲಿಲ್ಲ".

ವೃತ್ತಿಪರ ಸಾಮಾಜಿಕ ಕಾರ್ಯ ಶಿಕ್ಷಣಕ್ಕಾಗಿ ದಕ್ಷಿಣ ಏಶ್ಯದ ಮೊದಲ ಸಂಸ್ಥೆಯನ್ನು ನವೀಕರಿಸುವುದು ಸುಲಭದ ಕೆಲಸವಾಗಿರಲಿಲ್ಲ. 1936ರಲ್ಲಿ ಸರ್ ದೊರಾಬ್ಜಿ ಟಾಟಾ ಟ್ರಸ್ಟ್ 20 ವಿದ್ಯಾರ್ಥಿಗಳೊಂದಿಗೆ ಮುಂಬೈನ ನಾಗ್ಪಾಡ ಸನಿಹದಲ್ಲಿ ಸರ್ ದೊರಾಬ್ಜಿ ಟಾಟಾ ಗ್ರಾಜುಯೇಟ್ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಅನ್ನು ಸ್ಥಾಪಿಸಿದಾಗ ಇದೆಲ್ಲವೂ ಶುರುವಾಗಿತ್ತು. ಆರಂಭದಿಂದಲೂ, ಮಹಾ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಬಸವಳಿದಿದ್ದ ಈ ಸಂಸ್ಥೆ ನ್ಯಾಯಯುತ ಮತ್ತು ಮಾನವೀಯ ಸಮಾಜವನ್ನು ನಿರ್ಮಿಸಲು ಬದ್ಧವಾಗಿತ್ತು. ಎಂಟು ವರ್ಷಗಳ ನಂತರ, ಇದಕ್ಕೆ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಎಂದು ಮರುನಾಮಕರಣ ಮಾಡಲಾಯಿತು.

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕನಿಷ್ಠ ರೈತರ ಕುಟುಂಬದಲ್ಲಿ ಜನಿಸಿದ ಪರಶುರಾಮನ್ ಅವರು 1981ರಲ್ಲಿ ತಮ್ಮ ಶೈಕ್ಷಣಿಕ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಜನಸಂಖ್ಯಾಶಾಸ್ತ್ರಜ್ಞ ಮತ್ತು ಮಾನವಶಾಸ್ತ್ರಜ್ಞರಾಗಿ ತರಬೇತಿ ಪಡೆದರು. 90ರ ದಶಕದ ಮಧ್ಯಭಾಗದಲ್ಲಿ, ಪರಶುರಾಮನ್ ಅವರು ಆಕ್ಸ್‌ಫ್ಯಾಮ್, ಅಣೆಕಟ್ಟುಗಳ ವಿಶ್ವ ಆಯೋಗ ಮತ್ತು ಆ್ಯಕ್ಷನ್ ಏಡ್ ಇಂಟರ್‌ನ್ಯಾಷನಲ್‌ನಂತಹ ಅಂತರ್‌ರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೆಲಸ ಮಾಡಿದರು.

ಆಗಸ್ಟ್ 2004ರಲ್ಲಿ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ನಿರ್ದೇಶಕರಾಗಿ ಬಂದಾಗ, ಸಂಸ್ಥೆಯು ಕೇವಲ ನಾಲ್ಕು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳನ್ನು ಹೊಂದಿತ್ತು ಮತ್ತು ಆ ಶೈಕ್ಷಣಿಕ ವರ್ಷದಲ್ಲಿ 264 ಹೊಸ ವಿದ್ಯಾರ್ಥಿಗಳು ಮಾತ್ರ ಇದ್ದರು. ಅವರಲ್ಲಿ ಅರ್ಧದಷ್ಟು ಮಹಾರಾಷ್ಟ್ರ ಮತ್ತು ದಿಲ್ಲಿಯಿಂದ ಬಂದವರು. ಪರಶುರಾಮನ್ 50ಕ್ಕೂ ಹೆಚ್ಚು ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಕೋರ್ಸ್‌ಗಳ ಸಂಖ್ಯೆಯನ್ನು ಹೆಚ್ಚಿಸಿದರು ಮತ್ತು ಎಲ್ಲರಿಗೂ ಅವನ್ನು ಮುಕ್ತವಾಗಿಸಿ ಹೊಸ ಸಾಧ್ಯತೆಯನ್ನೇ ತೋರಿಸಿದರು.

ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಪ್ರವೇಶ ಪರೀಕ್ಷೆಗೆ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಪೂರ್ವ ಪ್ರವೇಶ ಓರಿಯಂಟೇಶನ್ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಇದರಿಂದ ಮೊದಲ ತಲೆಮಾರಿನ ಕಲಿಕಾರ್ಥಿಗಳಿಗೆ ಅಗಾಧವಾಗಿ ಪ್ರಯೋಜನವಾಯಿತು. ಇಂದು, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಸುಮಾರು 5,000 ವಿದ್ಯಾರ್ಥಿಗಳನ್ನು ಹೊಂದಿದೆ, ಅವರಲ್ಲಿ ಅರ್ಧದಷ್ಟು ಜನರು ದಮನಿತ ಸಮುದಾಯಗಳಿಂದ ಬಂದವರು.

TISS ನವೀನ ಅಂತರ್ ಶಿಸ್ತೀಯ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಮೂಲಕ, ಅವುಗಳಲ್ಲಿ ಹಲವು ದೇಶದಲ್ಲಿ ಮೊದಲ ಬಾರಿಗೆ ನೀಡಲ್ಪಟ್ಟವು, ಶೀಘ್ರದಲ್ಲೇ ಬಹುಮುಖಿ ಸಾರ್ವಜನಿಕ ವಿಶ್ವವಿದ್ಯಾನಿಲಯವಾಗಿ ಸಮಾಜ ವಿಜ್ಞಾನ ಶಿಕ್ಷಣವನ್ನು ಮರುರೂಪಿಸಿತು. ಪೋರ್ಟ್‌ಬ್ಲೇರ್, ಲಡಾಖ್, ನಾಗಾಲ್ಯಾಂಡ್, ಹೊಸದಿಲ್ಲಿ, ತಿರುವನಂತಪುರಂ, ಪಾಟ್ನಾ, ಚೆನ್ನೈ, ರಾಯ್‌ಪುರ್ ಮತ್ತು ರಾಂಚಿಯಲ್ಲಿ ಕೇಂದ್ರಗಳನ್ನು ಸ್ಥಾಪಿಸುವುದರ ಜೊತೆಗೆ, ಪರಶುರಾಮನ್ ಗುವಾಹಟಿ ಮತ್ತು ಹೈದರಾಬಾದ್ ಎಂಬ ಎರಡು ಹೊಸ ಆಫ್-ಕ್ಯಾಂಪಸ್‌ಗಳನ್ನು ತೆರೆದರು. ಇದು ದೂರದ ಪ್ರದೇಶಗಳಲ್ಲಿರುವವರು ಸೇರಿದಂತೆ ಭಾರತದ ಅತ್ಯಂತ ದುರ್ಬಲ ಸಮುದಾಯಗಳನ್ನು ತಲುಪಲು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಪಾಲಿಗೆ ಅವಕಾಶ ಮಾಡಿಕೊಟ್ಟಿತು.

ಪರಶುರಾಮನ್ ಅವರು ನೀತಿ ಅಭಿವೃದ್ಧಿಗೆ ಕೊಡುಗೆ ನೀಡಲು ಸಂಶೋಧನೆಯನ್ನು ಸಮರ್ಥಿಸುವ ಸಾಧನವಾಗಿ ಬಳಸಿಕೊಳ್ಳಲು ಒತ್ತು ನೀಡಿದರು. ಅವರ ನಾಯಕತ್ವದಲ್ಲಿ, ಸಂಸ್ಥೆಯು ಕೇಂದ್ರ ಮತ್ತು ರಾಜ್ಯ ಸರಕಾರಗಳು, ಜನಾಂದೋಲನಗಳು, ಸಂಸ್ಥೆಗಳು, ಉದ್ಯಮ, ಸಮುದಾಯಗಳು ಮತ್ತು ಸ್ಥಳೀಯ ಮತ್ತು ಅಂತರ್-ಸರಕಾರಿ ಸಂಸ್ಥೆಗಳೊಂದಿಗೆ ಜನ-ಕೇಂದ್ರಿತ ಅಭಿವೃದ್ಧಿ ಉಪಕ್ರಮಗಳು ಮತ್ತು ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ನಿಕಟವಾಗಿ ಕೆಲಸ ಮಾಡಿತು.

ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಪ್ರಪಂಚದಾದ್ಯಂತ 100ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳು ಮತ್ತು ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ ಮತ್ತು ಅಸ್ಕರ್ ವಿಶ್ವವಿದ್ಯಾನಿಲಯ ನೆಟ್‌ವರ್ಕ್‌ಗಳನ್ನು ಸೇರಿಕೊಂಡಿದೆ. ಅದು ಈಗ ಸಂಸ್ಥೆ ಹೊಂದಿರುವ ವಿಶ್ವಾಸಾರ್ಹತೆ ಮತ್ತು ಖ್ಯಾತಿಗೆ ಕಾರಣ.

ಅವರು ಬಡವರ ಪರ, ಜನರ ಪರ ನಿರ್ದೇಶಕ. ಪರಶುರಾಮನ್ ಅವರು ಉನ್ನತ ಶಿಕ್ಷಣ ಮತ್ತು ಸಂಶೋಧನೆಯನ್ನು ಅಸಮಾನತೆ ಮತ್ತು ಅಭಾವದ ವಿರುದ್ಧ ಹೋರಾಡುವ ಸಾಧನವಾಗಿ ಬಳಸಿಕೊಂಡರು. ಸಾಮಾಜಿಕ ನ್ಯಾಯ, ಸಮಾನತೆ, ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯ ವಿಷಯಗಳಿಗೆ ಅವರ ಬದ್ಧತೆ ಅಪ್ರತಿಮವಾಗಿತ್ತು. ‘‘ನನ್ನನ್ನು ಅಭಿವೃದ್ಧಿ ವಿರೋಧಿ ಎಂದು ಕರೆಯಲಾಗುತ್ತದೆ. ಆದರೆ, ನಾನು ಅಭಿವೃದ್ಧಿಯ ವಿರೋಧಿಯಲ್ಲ, ನಾನು ಬಡವರ ಪರ, ಜನರ ಪರ’’ ಎನ್ನುತ್ತಿದ್ದರು ಅವರು.

ಅವರ ಜೊತೆ ಕೆಲಸ ಮಾಡುವುದು ಎಂದಿಗೂ ವೃತ್ತಿ ಅಥವಾ ವೈಯಕ್ತಿಕ ಲಾಭವನ್ನು ತರುತ್ತಿರಲಿಲ್ಲ. ಅದು ಸಮಾಜದಲ್ಲಿ ಬದಲಾವಣೆಯನ್ನು ಮಾಡುವುದಕ್ಕಾಗಿ ಆರಿಸಿಕೊಳ್ಳುವ ದಾರಿಯಾಗುತ್ತಿತ್ತು. ನಿರ್ದೇಶಕರ ಕಚೇರಿಯಲ್ಲಿ ಅವರೊಂದಿಗೆ ಕೆಲಸ ಮಾಡಲು ಅವರು ಆರಿಸಿಕೊಂಡವರು ಯಾವುದೇ ವಿಶೇಷ ಸವಲತ್ತುಗಳನ್ನು ಪಡೆಯಲಿಲ್ಲ ಮತ್ತು ಅಂಥವರು ಅತ್ಯುನ್ನತ ಗುಣಮಟ್ಟವನ್ನು ಹೊಂದಿರಬೇಕೆಂದು ಬಯಸುವುದರಿಂದ ಯಾವುದೇ ವಿಶೇಷ ಸವಲತ್ತುಗಳಿಗೆ ಆಸೆಪಡದೆ ಪರಶುರಾಮನ್ ಅವರೊಡನೆ ಕೆಲಸ ಮಾಡಬಲ್ಲವರಾಗಿರುತ್ತಿದ್ದರು.

ಪರಶುರಾಮನ್ ಅಧಿಕಾರ ಶ್ರೇಣಿಗಳನ್ನು ದ್ವೇಷಿಸುತ್ತಿದ್ದರು. ಅವರ ಕಚೇರಿ ಮತ್ತು ಮನೆಯ ಬಾಗಿಲುಗಳು ಯಾವಾಗಲೂ ಎಲ್ಲರಿಗೂ ತೆರೆದಿರುತ್ತಿದ್ದವು. ಸಾಮಾನ್ಯವಾಗಿ, ಸೌಲಭ್ಯ ವಂಚಿತ ವಿದ್ಯಾರ್ಥಿಗಳು ಶುಲ್ಕ ಪಾವತಿಸಲು ಸ್ಕಾಲರ್‌ಶಿಪ್‌ಗಳು, ಕಾನ್ಫರೆನ್ಸ್ ಗೆ ಹಾಜರಾಗಲು ಪ್ರಯಾಣ ಅನುದಾನ ಅಥವಾ ಸಂಶೋಧನಾ ಯೋಜನೆಗಳಿಗಾಗಿ ಲ್ಯಾಪ್‌ಟಾಪ್‌ಗಳು ಮತ್ತು ಉದ್ಯೋಗಾವಕಾಶಗಳು ಎಲ್ಲದರ ವಿಚಾರದಲ್ಲಿಯೂ ಪರಶುರಾಮನ್ ನೆರವು ಯಾವಾಗಲೂ ಇರುತ್ತಿತ್ತು.

ಪರಶುರಾಮನ್ ಅವರ ಅನೇಕ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಅವರ ಮೌಲ್ಯಗಳನ್ನು ಅಳವಡಿಸಿಕೊಂಡರು. 2015ರಲ್ಲಿ ಸಂಸ್ಥೆಯು ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದಾಗ, ಪರಶುರಾಮನ್ ಸೇರಿದಂತೆ ನಮ್ಮಲ್ಲಿ ಅನೇಕರು ಸಂತೋಷದಿಂದ ಕೆಲವು ಕಾಲ ಸಂಬಳವನ್ನು ತ್ಯಜಿಸಲು ನಿರ್ಧರಿಸಿದರು. ಅವರ ನಾಯಕತ್ವ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಅನ್ನು ಒಂದು ಅನನ್ಯ ಸಂಸ್ಥೆಯನ್ನಾಗಿ ಮಾಡಿತು.

2018ರಲ್ಲಿ ಅವರು ನಿರ್ದೇಶಕರ ಸ್ಥಾನದಿಂದ ಕೆಳಗಿಳಿಯುವ ಒಂದು ವರ್ಷ ಅಥವಾ ಅದಕ್ಕಿಂತ ಮೊದಲು, ಪರಶುರಾಮನ್ ಸಂಪೂರ್ಣವಾಗಿ ಅಸಹಾಯಕರಾಗಿದ್ದರು. ಬದಲಾದ ರಾಜಕೀಯ ಪರಿಸ್ಥಿತಿ ಮತ್ತು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಹೆಚ್ಚುತ್ತಿರುವ ಆರ್ಥಿಕ ಸಮಸ್ಯೆಗಳ ಜೊತೆಗೆ, ಸಂಸ್ಥೆಯಲ್ಲಿ ಮತ್ತು ಇತರೆಡೆಗಳಲ್ಲಿ ಅವರ ದೀರ್ಘಕಾಲದ ಸ್ನೇಹಿತರು ಮತ್ತು ಸಹೋದ್ಯೋಗಿಗಳು ತಿರುಗಿಬಿದ್ದಿದ್ದಾರೆ ಎಂದು ಅವರು ಭಾವಿಸಿದ್ದರು. ಕೆಲವೊಮ್ಮೆ ಒಂಟಿತನ ಎಲ್ಲರನ್ನೂ ಕಾಡುತ್ತದೆ. ಆದರೆ ಪರಶುರಾಮ ಅವರ ಒಂಟಿತನ ತೀವ್ರವಾದುದಾಗಿತ್ತು.

ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಎಂದರೆ ಅವರಿಗೆ ಜಗತ್ತೇ ಆಗಿತ್ತು. ಅದನ್ನು ಅವರು ತನ್ನ ಜೀವಿತಾವಧಿಯಲ್ಲಿ ಎಂದಿಗೂ ಬಿಡಲು ಬಯಸಲಿಲ್ಲ. 2018ರ ಆರಂಭದಲ್ಲಿ, ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳು ಪರಶುರಾಮನ್ ಅವರಿಗೆ ವಿದಾಯ ಹೇಳುತ್ತಿದ್ದಾಗ, ಅವರು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಆದರ್ಶದ ಭಾಗವನ್ನೇ ಶಾಶ್ವತವಾಗಿ ತನ್ನೊಂದಿಗೆ ತೆಗೆದುಕೊಂಡು ಹೋಗುತ್ತಾರೆ ಎಂದು ಅವರಿಗೆ ತಿಳಿದಿರಲಿಲ್ಲ. ಅವರ ನಿರ್ಗಮನದ ನಂತರ, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಅಭೂತಪೂರ್ವ ಬದಲಾವಣೆಯನ್ನು ಅನುಭವಿಸಿತು, ಇದನ್ನು ವಿದ್ಯಾರ್ಥಿಗಳ ಒಕ್ಕೂಟದ ಮಾಜಿ ಸದಸ್ಯರೊಬ್ಬರು ನನಗೆ ಹೀಗೆ ವಿವರಿಸಿದರು: ‘‘ಆಗ, ಪರಶುರಾಮನ್ ತಮ್ಮ ಚಟುವಟಿಕೆಗಾಗಿ ಬಂಧಿತ ವಿದ್ಯಾರ್ಥಿಗಳಿಗೆ ಜಾಮೀನು ನೀಡಲು ಪೊಲೀಸ್ ಠಾಣೆಗೆ ಹೋಗುತ್ತಿದ್ದರು. ಇಂದು, ನಮ್ಮದೇ ಸಂಸ್ಥೆಯು ಮಾರ್ಚ್ 2018ರಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ಹಿಂದೆಗೆದುಕೊಳ್ಳುವ ವಿಷಯದ ಬಗ್ಗೆ ಪ್ರತಿಭಟನೆಯನ್ನು ಮಾಡಿದ್ದಕ್ಕಾಗಿ ನಮ್ಮ ವಿರುದ್ಧ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣದ ವಿರುದ್ಧ ನಾವು ಐದು ಮಂದಿ ಹೋರಾಡುತ್ತಿದ್ದೇವೆ.’’

ಆ ವ್ಯಕ್ತಿ ಕೇಳಿದರು:, ಪರಶುರಾಮನ್ ಈ ಸಂಸ್ಥೆಯಲ್ಲಿ ಹೀಗೆ ಯಾರದೋ ಹಸ್ತಕ್ಷೇಪವನ್ನು ಸಹಿಸಿಕೊಳ್ಳುತ್ತಿದ್ದರೆ? ಅವನಿಗೂ ನನಗೂ ಉತ್ತರ ಗೊತ್ತಿತ್ತು.

ಕೃಪೆ: scroll.in

Similar News