921 ಎಲೆಕ್ಟ್ರಿಕ್ ಬಸ್‍ಗಳ ಕಾರ್ಯಾಚರಣೆ: ಟಾಟಾ ಮೋಟರ್ಸ್-ಬಿಎಂಟಿಸಿ ಒಪ್ಪಂದಕ್ಕೆ ಸಹಿ

Update: 2022-12-17 05:07 GMT

ಬೆಂಗಳೂರು, ಡಿ. 16: ಬೆಂಗಳೂರು ನಗರದಲ್ಲಿ ಬಿಎಂಟಿಸಿ ಮೂಲಕ 921 ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆಗಾಗಿ ಟಾಟಾ ಮೋಟರ್ಸ್ ತನ್ನ ಮಾಲಕತ್ವದ ಅಧೀನ ಸಂಸ್ಥೆ ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಷನ್ಸ್ ನಿಶ್ಚಿತ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಿದೆ.

ಒಪ್ಪಂದದ ಭಾಗವಾಗಿ, ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಶನ್ಸ್ ಲಿ., 12 ವರ್ಷಗಳವರೆಗೆ, 921 ಯೂನಿಟ್‍ಗಳ 12-ಮೀಟರ್ ಲೋ- ಫ್ಲೋರ್ ಎಲೆಕ್ಟ್ರಿಕ್  ಬಸ್‍ಗಳನ್ನು ಸರಬರಾಜು ಮಾಡಿ, ಕಾರ್ಯಾಚರಣೆ ನಡೆಸಿ ನಿರ್ವಹಿಸುತ್ತದೆ. ಟಾಟಾ ಸ್ಟಾರ್ ಬಸ್ ಎಲೆಕ್ಟ್ರಿಕ್ ದೀರ್ಘಕಾಲ ಇರುವಂತಹ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ವಿನ್ಯಾಸ ಮತ್ತು ವರ್ಗದಲ್ಲೆ ಅತ್ಯುತ್ತಮವಾದ ಅಂಶಗಳೊಂದಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ವಾಹನವಾಗಿದೆ.

ಈ ಸಂದರ್ಭದಲ್ಲಿ ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‍ಪೋರ್ಟ್ ಕಾರ್ಪೊರೇಶನ್(ಬಿಎಂಟಿಸಿ)ನ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ, ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಶನ್ಸ್ ಲಿಮಿಟೆಡ್‍ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಸೀಮ್ ಕುಮಾರ್ ಮುಖೋಪಾಧ್ಯಾಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Similar News