ಬಿಎಂಟಿಸಿ; ವಿಕಲಚೇತನರ ಬಸ್ ಪಾಸ್‍ಗೆ ಅರ್ಜಿ ಆಹ್ವಾನ

Update: 2022-12-24 13:38 GMT

ಬೆಂಗಳೂರು, ಡಿ.24: ಪ್ರಸಕ್ತ ಸಾಲಿನ ವಿಕಲಚೇತನರ ರಿಯಾಯಿತಿ ಬಿಎಂಟಿಸಿ ಬಸ್ ಪಾಸಿಗಾಗಿ ಅರ್ಹ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ https://sevasindhuservices.karnataka.gov.in ಟಿ ಮೂಲಕ ಆನ್‍ಲೈನ್‍ನಲ್ಲಿ ಡಿ.26ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ತಾವು ಆಯ್ಕೆ ಮಾಡಿಕೊಂಡ ಬಸ್ ನಿಲ್ದಾಣಗಳಿಗೆ ತೆರಳಿ ದಾಖಲೆಗಳನ್ನು ಸಲ್ಲಿಸಿ ಪಾಸ್‍ಗಳನ್ನು ಪಡೆಯಬಹುದಾಗಿದೆ.

ವಿಕಲಚೇತನರ ರಿಯಾಯಿತಿ ಪಾಸ್‍ಗಳನ್ನು ಡಿ.26ರಿಂದ ನೂತನ ಪಾಸುಗಳನ್ನು ವರ್ಷವಿಡೀ ವಿತರಣೆ ಮಾಡಲಾಗುವುದು. ಹಾಗೆಯೇ ಕಳೆದ ಸಾಲಿನ ವಿಕಲಚೇತನರ ಬಸ್‍ಪಾಸ್‍ಗಳನ್ನು ಫೆ.28ರೊಳಗೆ ನವೀಕರಣ ಮಾಡಿಸಿಕೊಳ್ಳಬೇಕು ಎಂದು ಪ್ರಕಟನೆಯಲ್ಲಿ ತಿಳಿಸಿದೆ.

Similar News